ಮಂಗಳೂರು : ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ಯೂನಿಯನ್ ಬ್ಯಾಂಕ್ ಸಹಯೋಗದೊಂದಿಗೆ ರಾಗತರಂಗ ಸಂಸ್ಥೆಯು ಭಾರತೀಯ ವಿದ್ಯಾಭವನದಲ್ಲಿ ದಿನಾಂಕ 17-11-2023ರಿಂದ 19-11-2023ರವರೆಗೆ ಶಾಲಾ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿತ್ತು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಂದ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ದಿನಾಂಕ 17-11-2023ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ನಗರಪಾಲಿಕೆಯ ಸದಸ್ಯ ಶ್ರೀ ದಿವಾಕರ್ ಪಾಂಡೇಶ್ವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಭಾರತೀಯ ವಿದ್ಯಾಭವನ ಗೌರವ ಕಾರ್ಯದರ್ಶಿ ಶ್ರೀ ಸುಧೀರ್ ಕುಮಾರ್ ಶೆಟ್ಟಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುದೇಶ್ ಶೆಟ್ಟಿ ಕೊಡಿಯಾಲಬೈಲ್, ಮಾನವ ಹಕ್ಕುಗಳ ಜಿಲ್ಲಾ ಯುವ ಘಟಕದ ಉಸ್ತುವಾರಿ ಶಮ್ಮಿ ಆತ್ಮಚರಣ್, ಭಾರತೀಯ ವಿದ್ಯಾಭವನ ನಿರ್ದೇಶಕರು, ರಾಗತರಂಗದ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ಡಾ. ದೇವರಾಜ್, ರಾಗತರಂಗದ ಅಧ್ಯಕ್ಷರಾದ ಆಶಾ ಹೆಗ್ಡೆ, ಕಾರ್ಯದರ್ಶಿ ಪಿ.ಸಿ.ರಾವ್, ಕೋಶಾಧ್ಯಕ್ಷರಾದ ಸೌಮ್ಯ ರಾವ್ ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಪೂರ್ಣಿಮಾ ರಾವ್ ಮತ್ತು ಮಮತಾ ರಾಜೀವ್ ಸ್ಪರ್ಧೆಗಳನ್ನು ಸಂಯೋಜಿಸಿದ್ದರು.
ಜಯಾ ರಾವ್, ಜಯಶ್ರೀ ಅರವಿಂದ್, ವಾಮನ್ ಮೈಂದನ್, ಗೀತಾ ಮೈಂದನ್, ಚಂದ್ರಶೇಖರ ದೈತೋಟ, ಮೀನಾ ದೈತೋಟ, ಚಂದ್ರಶೇಖರ ಆಚಾರ್ಯ, ಸುಂದರ್ ಪಟೇಲ್, ಜಯಪ್ರಕಾಶ ಶೆಟ್ಟಿ, ಹರೀಶ್ ಯು. ರಾವ್ ಮತ್ತು ಲೋಲಾಕ್ಷಿ ಸಹಕರಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಶಿಧರ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿದರು. ಸಂಗೀತ, ಭರತನಾಟ್ಯ, ಛದ್ಮವೇಷ, ಸಮೂಹಗಾನ, ಜಾನಪದ ಸಮೂಹ ನೃತ್ಯ, ಆಶು ಭಾಷಣ, ರಸಪ್ರಶ್ನೆ ಸುಗಮ ಸಂಗೀತ, ವಾದ್ಯ ಸಂಗೀತ ಮುಂತಾದ ವಿಷಯಗಳಲ್ಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವು ಮುಂದಿನ ತಿಂಗಳಲ್ಲಿ ನಡೆಯಲಿರುವ ಬಾಲಪ್ರತಿಭೋತ್ಸವ ಸಮಾರಂಭದಲ್ಲಿ ನಡೆಯಲಿದೆ.
ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ ಈ ರೀತಿ ಇದೆ.
ದೇಶಭಕ್ತಿ ಗೀತೆ – ಸೀನಿಯರ್
ಆದಿಶ್ರೀ ತಂಡ, ಸಂತ ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲಬೈಲ್ ಮಂಗಳೂರು
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಜ್ಯೂನಿಯರ್
ಪ್ರಥಮ – ಪ್ರಧಯ್ ಕಿರಣ್ ಶೆಣೈ, ಕೆನರಾ ಸಿ.ಬಿ.ಎಸ್.ಇ.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸೀನಿಯರ್
ಪ್ರಥಮ – ಅನನ್ಯ ನಾರಾಯಣ್, ಕೆನರಾ ಹೈಸ್ಕೂಲ್ ಉರ್ವ ಮಂಗಳೂರು
ದ್ವಿತೀಯ – ಸಂಹಿತಾ ಶೆಣೈ ನಿಟ್ಟೆ, ಕೆನರಾ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್, ಡೊಂಗರಕೇರಿ.
ಸುಗಮ ಸಂಗೀತ ಜ್ಯೂನಿಯರ್
ಪ್ರಥಮ – ಪ್ರಧಯ್ ಕಿರಣ್ ಶೆಣೈ, ಕೆನರಾ ಸಿ.ಬಿ.ಎಸ್.ಇ.
ದ್ವಿತೀಯ – ನಿನಾದ ಕೆ., ಶಾರದಾ ವಿದ್ಯಾಲಯ
ತೃತೀಯ – ಸಿರಿ ಹಿಲ್ಲೆಮನೆ, ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪುತ್ತೂರು.
ಸಮಾಧಾನಕರ- ಸ್ವಸ್ತಿ ಎಮ್. ಭಟ್, ಮಾಧವಕೃಪಾ ಮಣಿಪಾಲ್
ಸುಗಮ ಸಂಗೀತ ಸೀನಿಯರ್
ಪ್ರಥಮ – ಅನಘಾ ರಾವ್, ಶಾರದಾ ವಿದ್ಯಾಲಯ
ದ್ವಿತೀಯ – ರಾಶಿ ಯು. ಶೆಟ್ಟಿ, ಶಾರದಾ ವಿದ್ಯಾಲಯ
ದ್ವಿತೀಯ -ಆಯುಷ್ ಪ್ರೇಮ್, ಸಂತ ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲಬೈಲ್ ಮಂಗಳೂರು
ತೃತೀಯ – ಅನನ್ಯ ನಾರಾಯಣ್, ಕೆನರಾ ಹೈಸ್ಕೂಲ್ ಉರ್ವ.
ಸಮಾಧಾನಕರ- ಅಕ್ಷಜ್ ಚೂರ್ಯ, ಕಾರ್ಮೆಲ್ ಸ್ಕೂಲ್ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ಕೋಟೆಕಾರ್.
ಆಶು ಭಾಷಣ ಜ್ಯೂನಿಯರ್
ಪ್ರಥಮ – ಸಿದ್ಧಾರ್ಥ್ ಪಿ. ಕೋಟೆಗಾರ್, ಕೇಂದ್ರೀಯ ವಿದ್ಯಾಲಯ ನಂ.2 ಎಕ್ಕೂರು ಮಂಗಳೂರು.
ದ್ವಿತೀಯ – ಸ್ವಸ್ತಿ ಎಮ್. ಭಟ್, ಮಾಧವಕೃಪಾ ಮಣಿಪಾಲ್
ಆಶು ಭಾಷಣ ಸೀನಿಯರ್
ಪ್ರಥಮ – ನವೋಮಿ (Naomi) ಸಾರಾ ಮಸ್ಕರೇನಸ್, ಸಂತ ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲಬೈಲ್ ಮಂಗಳೂರು
ದ್ವಿತೀಯ – ಗಗನ ಎಸ್. ರಾವ್, ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ಕೋಟೆಕಾರ್.
ತೃತೀಯ – ಅನ್ನಾ (Anna) ಲೀಸಾ ಡಿಕೋಸ್ಟ, ಸಂತ ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲಬೈಲ್ ಮಂಗಳೂರು
ರಸಪ್ರಶ್ನೆ
ಪ್ರಥಮ- ಇರಾ ಜೈನ್ ಮತ್ತು ರಿಷಬ್ ನಾಯ್ಕ್, ಮಣಿಪಾಲ್ ಸ್ಕೂಲ್
ದ್ವಿತೀಯ- ರಜತ್ ಶೆಣೈ ಮತ್ತು ಪ್ರಯಾಗ್ ಜಿ. ಕೊಟ್ಟಾರ್, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪಾಡಿ
ತೃತೀಯ- ಗಗನ್ ಕೆ. ಸುವರ್ಣ ಮತ್ತು ಸಮ್ಯಕ್ ಯೋಗೀಶ್, ಎಸ್.ಡಿ.ಎಂ. ಮಂಗಳೂರು.
ಕರ್ಣಾಟಕ ಶಾಸ್ತ್ರೀಯ ಸಂಗೀತ ಜ್ಯೂನಿಯರ್
ಪ್ರಥಮ- ಸ್ವಸ್ತಿ ಎಮ್. ಭಟ್, ಮಾಧವಕೃಪಾ ಮಣಿಪಾಲ್
ದ್ವಿತೀಯ- ವಿಧಾತ್ರಿ ಜಿ. ಮಯ್ಯ, ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆ.
ದ್ವಿತೀಯ- ನಿನಾದ ಕೆ., ಶಾರದಾ ವಿದ್ಯಾಲಯ
ತೃತೀಯ- ವೈಷ್ಣವಿ ರಾವ್, ಸೈಂಟ್ ಆಗ್ನೆಸ್ ಸಿ.ಬಿ.ಎಸ್.ಇ. ಸ್ಕೂಲ್
ಕರ್ಣಾಟಕ ಶಾಸ್ತ್ರೀಯ ಸೀನಿಯರ್
ಪ್ರಥಮ- ಅನಿಶಾ ರಾವ್, ಶಾರದಾ ವಿದ್ಯಾಲಯ
ದ್ವಿತೀಯ- ದೇವಸೇನಾ, ಕೆನರಾ ಸಿ.ಬಿ.ಎಸ್.ಇ.
ದ್ವಿತೀಯ- ಮಾನ್ವಿ ಭಟ್, ಅಸಿಸ್ಸಿ ಸೆಂಟ್ರಲ್ ಸ್ಕೂಲ್.
ದ್ವಿತೀಯ- ಆದಿಶ್ರೀ ರೈ, ಸಂತ ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲಬೈಲ್ ಮಂಗಳೂರು
ಛದ್ಮ ವೇಷ ಸಬ್ ಜ್ಯೂನಿಯರ್
ಪ್ರಥಮ- ಸಿವಿಕಾ ಡಿಂಪಲ್, ಸರೋಜಿನಿ ಮಧುಸೂದನ್ ಕುಶೆ
ದ್ವಿತೀಯ- ವಿಭಿಕ್ಷಾ, ಸಂತ ಡೊಮಿನಿಕ್ ಸ್ಕೂಲ್
ತೃತೀಯ- ಮೋಕ್ಷಾ ಬಿ., ಆರ್. ಕೇಂದ್ರೀಯ ವಿದ್ಯಾಲಯ.
ಛದ್ಮ ವೇಷ ಜ್ಯೂನಿಯರ್
ಪ್ರಥಮ- ಹಿತಾಂಶಿ ಬಿ. ಭಂಜನ್, ಅಸಿಸ್ಸಿ ಸೆಂಟ್ರಲ್ ಸ್ಕೂಲ್ ದೇರಳಕಟ್ಟೆ.
ದ್ವಿತೀಯ- ಧನ್ವಿ ಕೆ., ಶ್ರೀ ರಾಮಕೃಷ್ಣ ಸ್ಕೂಲ್ ಬಂಟ್ಸ್ ಹಾಸ್ಟೆಲ್
ತೃತೀಯ- ಗನಿಕ್ಷ, ದ.ಕ.ಜಿ.ಪಂ. ಹೈಯರ್ ಪ್ರೈಮರಿ ಸ್ಕೂಲ್ ಕರಂಬಾರ್.
ಛದ್ಮ ವೇಷ ಸೀನಿಯರ್
ಪ್ರಥಮ- ಹಂಶಿತ್ ಆಳ್ವ, ವಿಶ್ವಮಂಗಳ ಹೈಯರ್ ಪ್ರೈಮರಿ ಸ್ಕೂಲ್
ದ್ವಿತೀಯ- ವಸುಂಧರಾ ಡಿ.ಎಮ್., ಚಿನ್ಮಯ ಹೈಸ್ಕೂಲ್ ಕದ್ರಿ ರೋಡ್ ಮಂಗಳೂರು
ತೃತೀಯ- ಇಶಾನಿ, ಬೆಸೆಂಟ್ ಇಂಗ್ಲಿಷ್ ಸ್ಕೂಲ್.
ಜಾನಪದ ನೃತ್ಯ ಜ್ಯೂನಿಯರ್
ಪ್ರಥಮ- ಜ್ಞಾನ ಎಸ್. ಮತ್ತು ತಂಡ, ಕಾರ್ಮೆಲ್ ಇಂಗ್ಲೀಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ಕೋಟೆಕಾರ್.
ದ್ವಿತೀಯ – ತಸ್ಮಯಿ ಭಟ್ನಾಗರ ಮತ್ತು ತಂಡ, ಎಸ್.ಡಿ.ಎಮ್. ಅಶೋಕನಗರ.
ಜಾನಪದ ನೃತ್ಯ ಸೀನಿಯರ್
ಪ್ರಥಮ- ಸಿಂಚನಾ ಸಂತೋಷ್ ಕುಮಾರ್, ಸಂತ ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲಬೈಲ್ ಮಂಗಳೂರು
ತಬ್ಲಾ/ಮೃದಂಗ ಸಬ್ ಜ್ಯೂನಿಯರ್
ಪ್ರಥಮ- ಆದ್ಯ ಯು., ಮೌಂಟ್ ಕಾರ್ಮೆಲ್ ಸ್ಕೂಲ್.
ತಬ್ಲಾ/ಮೃದಂಗ ಜ್ಯೂನಿಯರ್
ಪ್ರಥಮ- ಗಗನ್ ಪಿ. ಅಮೀನ್, ಎಸ್.ವಿ.ಎಸ್. ಟೆಂಪುಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ
ದ್ವಿತೀಯ- ಸತ್ಯಸ್ವರೂಪ ಪಿ., ಎಸ್.ಡಿ.ಎಮ್. ಅಶೋಕನಗರ
ತಬ್ಲಾ/ಮೃದಂಗ ಸೀನಿಯರ್
ಪ್ರಥಮ- ಆದಿತ್ಯ ಪಿ. ಭಟ್, ಶಾರದಾ ವಿದ್ಯಾಲಯ
ಪ್ರಥಮ- ಅನಂತ ಭಂಡಾರ್ಕರ್, ಕೆನರಾ ಪಿ.ಯು. ಕಾಲೇಜು
ಕೊಳಲು/ಸ್ಯಾಕ್ಸೋಫೋನ್ ಜ್ಯೂನಿಯರ್
ಪ್ರಥಮ- ಅನನ್ಯ ಪಿ. ಭಟ್, ಎಸ್.ವಿ.ಎಸ್. ಇಂಗ್ಲಿಷ್ ಸ್ಕೂಲ್ ವಿದ್ಯಾಗಿರಿ ಬಂಟ್ವಾಳ
ದ್ವಿತೀಯ- ಸಮರ್ಥ ಶೇಣವಿ, ಜೆ.ಎನ್.ವಿ. ಮುಡಿಪು
ಸಮಾಧಾನಕರ- ಸುಶಾಂತ್ ಭಟ್ ಜಿ.ಎ., ಎಸ್.ಡಿ.ಎಮ್. ಅಶೋಕನಗರ
ಕೊಳಲು/ಸ್ಯಾಕ್ಸೋಫೋನ್ ಸೀನಿಯರ್
ಪ್ರಥಮ- ಸಾರಂಗ ರಾವ್ ಇನೋಳಿ, ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು
ಹಾರ್ಮೋನಿಯಂ/ಕೀಬೋರ್ಡ್ ಸಬ್ ಜ್ಯೂನಿಯರ್
ಪ್ರಥಮ- ಜಿ. ದೀಪಾ ನಾಯಕ್, ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ.
ದ್ವಿತೀಯ- ಸಾವನ್ ಎ.ಪಿ., ಕೆನರಾ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ಡೊಂಗರಕೇರಿ.
ಹಾರ್ಮೋನಿಯಂ/ಕೀಬೋರ್ಡ್ ಜ್ಯೂನಿಯರ್
ಪ್ರಥಮ- ಮೇಧಾ ಜಿ. ಭಟ್, ಶಾರದಾ ವಿದ್ಯಾಲಯ,
ದ್ವಿತೀಯ- ತೃಷಾ, ಎಸ್.ಎಲ್.ಎನ್.ಪಿ. ವಿದ್ಯಾಲಯ ಪಾಣೆಮಂಗಳೂರು.
ಹಾರ್ಮೋನಿಯಂ/ಕೀಬೋರ್ಡ್ ಸೀನಿಯರ್
ಪ್ರಥಮ- ಆದಿತ್ಯ ಪಿ. ಭಟ್, ಶಾರದಾ ಪಿ ಯು ಕಾಲೇಜು.
ವಯೋಲಿನ್/ವೀಣೆ/ಸಿತಾರ್ ಜ್ಯೂನಿಯರ್
ಪ್ರಥಮ- ಅನಿಕಾ ಸೂರಿ, ಶಾರದಾ ವಿದ್ಯಾಲಯ
ದ್ವಿತೀಯ- ಶ್ರೀವತ್ಸ, ಲಕ್ಷ್ಮೀಜನಾರ್ದನ ಇಂಟರ್ನ್ಯಾಷನಲ್ ಸ್ಕೂಲ್ ನಂದಳಿಕೆ.
ತೃತೀಯ- ಅನಿಶಾ ರಾವ್ , ಶಾರದಾ ವಿದ್ಯಾಲಯ
ವಯೋಲಿನ್/ವೀಣೆ/ಸಿತಾರ್ ಸೀನಿಯರ್
ಪ್ರಥಮ- ಕಾದಂಬರಿ ಡಿ., ಎಮ್.ಜಿ.ಎಮ್ . ಪಿ.ಯು. ಕಾಲೇಜು ಉಡುಪಿ.
ಭರತನಾಟ್ಯ ಸಬ್ ಜ್ಯೂನಿಯರ್
ಪ್ರಥಮ – ಅದ್ವಿಕಾ ಭಟ್, ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್
ದ್ವಿತೀಯ – ಮನಸ್ವಿ ಉಪ್ಪಿನೆ, ವಿಶ್ವಮಂಗಳ ಹೈಯರ್ ಪ್ರೈಮರಿ ಸ್ಕೂಲ್
ತೃತೀಯ – ರಿದ್ಧಿ ಶೆಟ್ಟಿ ಎನ್., ಸೈಂಟ್ ಮೇರೀಸ್ ಸೆಂಟ್ರಲ್ ಸ್ಕೂಲ್.
ಸಮಾಧಾನಕರ – ಸನಯಾ ನಾಯರ್, ಸೈಂಟ್ ಅಲೋಶಿಯಸ್ ಗೊನ್ಝಗಾ
ಭರತನಾಟ್ಯ ಜ್ಯೂನಿಯರ್
ಪ್ರಥಮ- ಸನಿಹ ಎಮ್., ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್
ದ್ವಿತೀಯ- ಅಂಜಲಿ ಲತೀಶ್, ಎಸ್.ಡಿ.ಎಮ್.
ತೃತೀಯ – ವೈಷ್ಣಾ ಶೆಟ್ಟಿ, ಶಾರದಾ ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್
ಸಮಾಧಾನಕರ- ತನ್ಮಯೀ ಅಡಿಗ, ಮೌಂಟ್ ರೋಸರಿ ಇಂಗ್ಲಿಷ್ ಸ್ಕೂಲ್ ಸಂತೆ ಕಟ್ಟೆ ಉಡುಪಿ
ಭರತನಾಟ್ಯ ಸೀನಿಯರ್
ಪ್ರಥಮ- ಶುಕೀ ರಾವ್, ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ.
ದ್ವಿತೀಯ- ಶೀತಲ್, ಕಾರ್ಮೆಲ್ ಸ್ಕೂಲ್
ತೃತೀಯ- ದ್ವಿತಿ ಡಿ. ಶೆಟ್ಟಿ, ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ.
ತೃತೀಯ – ಎಸ್. ಅನಘಶ್ರೀ, ಅನಂತೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್