ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ನೆನಪು ಮೂವೀಸ್ ಕೋಟ, ಉಸಿರು ಕೋಟ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮಾಹಿತಿ ಕೇಂದ್ರ ಕೋಟತಟ್ಟು ಇವರ ಆಸರೆಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯು ಜೂನಿಯರ್ ವಿಭಾಗದಲ್ಲಿ (5ರಿಂದ 7ನೇ ತರಗತಿ) ಮತ್ತು ಸೀನಿಯರ್ ವಿಭಾಗದಲ್ಲಿ (8ರಿಂದ 10ನೇ ತರಗತಿ) ನಡೆಯಲಿದೆ. ಜೂನಿಯರ್ ಮತ್ತು ಸೀನಿಯರ್ ಎರಡು ವಿಭಾಗಕ್ಕೂ ಒಂದೊಂದು ವಿಷಯ ಕೊಡಲಾಗುವುದು.
ಸ್ಪರ್ಧೆಯ ನಿಯಮಗಳು : ಜೂನಿಯರ್ ವಿಭಾಗಕ್ಕೆ ಐಚ್ಚಿಕ (ಅವರ ಆಯ್ಕೆ), ಸೀನಿಯರ್ ವಿಭಾಗಕ್ಕೆ ಕರಾವಳಿ ವೈಭವ, ಪೆನ್ಸಿಲ್ ಶೇಡಿಂಗ್ ಒಂದನ್ನು ಹೊರತು ಪಡಿಸಿ ಬೇರೆ ಯಾವ ಬಣ್ಣವನ್ನು, ಬಳಸಿಕೊಂಡು ಚಿತ್ರ ರಚಿಸಬಹುದು (ಪೆನ್ಸಿಲ್ ಆರ್ಟ್ ಗೆ ಯಾವುದೇ ಮಾನ್ಯತೆ ನೀಡಲಾಗುವುದಿಲ್ಲ) ಜೂನಿಯರ್ ವಿಭಾಗದ ನೊಂದಾವಣೆಗಾಗಿ ಶೈಲಜಾ ಕೆ.ಎನ್. (9663750499) ಹಾಗೂ ಸೀನಿಯರ್ ವಿಭಾಗದ ನೊಂದಾವಣೆಗಾಗಿ ಚಿತ್ರಕಲಾ ಕಲಾವಿದರು ಗಿರೀಶ್ ವಕ್ವಾಡಿ (7022841879) ಇವರನ್ನು ಸಂಪರ್ಕಿಸಬಹುದು. ನೊಂದಾವಣೆಗೆ ಕೊನೆಯ ದಿನಾಂಕ 20 ಜನವರಿ 2026 ಆಗಿದ್ದು, ಮೊದಲು ನೊಂದಾಯಿಸಿದ 50 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಸ್ಪರ್ಧೆಯು ಕಾರಂತ ಥೀಮ್ ಪಾರ್ಕ್‌ನಲ್ಲಿ ದಿನಾಂಕ 26 ಜನವರಿ 2026ರಂದು ಮಧ್ಯಾಹ್ನ 3-00 ಗಂಟೆಗೆ ನಡೆಯಲಿದೆ ಎಂದು ಥೀಮ್ ಪಾರ್ಕ್ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್, ಅಧ್ಯಕ್ಷರಾದ ಸತೀಶ ಕುಂದರ್, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಕಾರ್ಯದರ್ಶಿ ಮುರಳೀಧರ ನಾಯರಿ ತಿಳಿಸಿದ್ದಾರೆ.
