ಬಂಟ್ವಾಳ : ದಿವಾಣ ಪ್ರತಿಷ್ಠಾನ ನೀಡುವ ‘ದಿವಾಣ ಪ್ರಶಸ್ತಿ’ಯನ್ನು ಹಿಮ್ಮೇಳ ಮಣಿಮುಂಡ ಸುಬ್ರಹ್ಮಣ್ಯ ಕಲಾವಿದ ಶಾಸ್ತ್ರಿ ಹಾಗೂ ದಿವಾಣ ಕಲಾ ಗೌರವ ಪ್ರಶಸ್ತಿಯನ್ನು ಬಣ್ಣದ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಪ್ರದಾನ ಮಾಡಲಾಯಿತು.
ದಿನಾಂಕ 16 ಮಾರ್ಚ್ 2025 ರಂದು ಪಾಂಡವರ ಕಲ್ಲು ಬಳಿ ಇರುವ ಅನನ್ಯ ಫಾರ್ಮ್ಸ್ ಫುಡ್ ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ದಿವಾಣ ತಿರುಮಲೇಶ್ವರಿ ಅಮ್ಮನವರ ಸ್ಮರಣಾರ್ಥ, ‘ಅನನ್ಯ ಫೀಡ್ಸ್ ಹುಬ್ಬಳ್ಳಿ’ ಇದರ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ಸಮಾಜ ಸೇವಕ ಉದಯಕುಮಾರ್ ಹಾಗೂ ಶಾರದಾ ದಂಪತಿಗೆ ‘ಅನನ್ಯ ರಜತ ಸಂಭ್ರಮ ಪುರಸ್ಕಾ’ರ ನೀಡಿ ಗೌರವಿಸಲಾಯಿತು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್, ಹರಿನಾರಾಯಣದಾಸ ಆಸ್ರಣ್ಣ, ಹಾದಿಗಲ್ಲು ಲಕ್ಷ್ಮೀನಾರಾಯಣ ಭಾಗವಹಿಸಿದ್ದರು.
ಎಂ. ಪ್ರಭಾಕರ ಜೋಶಿ ಇವರು ದಿವಾಣ ಭೀಮ ಭಟ್ಟರ ಸಂಸ್ಮರಣೆ ಮಾಡಿದರು. ಯಕ್ಷಗಾನ ಕಲಾವಿದ ಹರೀಶ ಬೊಳಂತಿಮೊಗರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ನಂತರ ಹನುಮಗಿರಿ ಮೇಳದ ಕಲಾವಿದರಿಂದ ‘ಸಾಕೇತ ಸಾಮ್ರಾಜ್ಜಿ’ ಯಕ್ಷಗಾನ ಪ್ರದರ್ಶನ ಗೊಂಡಿತು. ದಿವಾಣ ಪ್ರತಿಷ್ಠಾನದ ಸಂಚಾಲಕ ದಿವಾಣ ಗೋವಿಂದ ಭಟ್ ಹಾಗೂ ಅನನ್ಯ ಭಟ್ ಉಪಸ್ಥಿತರಿದ್ದರು.