ಸುಳ್ಯ : ಸಂತಕವಿ ಕನಕದಾನ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ಕನಕದಾಸರ ಕುರಿತು ‘ಕನಕ ಕಾವ್ಯ ವೈಭವ’ ಎಂಬ ನಂಗೀತ-ನೃತ್ಯ ರೂಪಕ, ಕನಕದಾಸರ ಕುರಿತು ಉಪನ್ಯಾಸ, ಗಮಕ ವಾಚನ-ವ್ಯಾಖ್ಯಾನ ಒಳಗೊಂಡಂತೆ ಒಂದು ದಿನದ ‘ಕನಕ ಉತ್ಸವ’ ಕಾರ್ಯಕ್ರಮವು ಗೋವಾದಲ್ಲಿ ದಿನಾಂಕ 24 ಆಗಸ್ಟ್ 2025ರಂದು ಗೋವಾದ ಹೊಟೇಲ್ ಝಡ್ ಸ್ವೇರ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕನಕದಾಸರ ಕುರಿತು ಉಪನ್ಯಾಸ ನೀಡಲು ಕರ್ನಾಟಕದಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ.
ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಸುಮಾರು 2500ಕ್ಕೂ ಮಿಕ್ಕಿ ತರಬೇತಿ, ಉಪನ್ಯಾಸಗಳನ್ನು ನೀಡಿದುದಲ್ಲದೇ ಹಲವು ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುವ ಡಾ. ಅನುರಾಧಾ ಕುರುಂಜಿಯವರು ಪದ್ಮಯ್ಯ ಗೌಡ ಕುರುಂಜಿ ಹಾಗೂ ಸೀತಮ್ಮ ಕುರುಂಜಿ ದಂಪತಿಗಳ ಪುತ್ರಿ ಹಾಗೂ ಕೆವಿಜಿ ಪಾಲಿಟೆಕ್ನಿಕ್ ಶಿಕ್ಷಕ ಚಂದ್ರಶೇಖರ ಬಿಳಿನೆಲೆಯವರ ಪತ್ನಿಯಾಗಿದ್ದಾರೆ.