ಇಳಕಲ್ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಭಾರತ ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ನಡೆಯಲಿರುವ ‘ಮೇಘಮೈತ್ರಿ ರಾಷ್ಟ್ರೀಯ ಚಿತ್ರಕಲಾ ಸಮ್ಮೇಳನ’ ಇಳಕಲ್ ನಲ್ಲಿ ನಡೆಯಲಿದ್ದು, ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಖ್ಯಾತ ಚಿತ್ರ ಕಲಾವಿದರು ಹಾಗೂ ಸಾಹಿತಿಗಳಾದ ಡಾ. ಬಸವರಾಜ ಗವಿಮಠ ಇವರನ್ನು ಇಲಕಲ್ಲ ಗುರು ಮಹಾಂತ ಶ್ರೀಮಠದಲ್ಲಿ ಶ್ರೀಗಳ ಅಧ್ಯಕ್ಷತೆಯಲ್ಲಿ ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ದಿನಾಂಕ 14 ಜುಲೈ 2025ರಂದು ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ರಮೇಶ ಕಮತಗಿ ತಿಳಿಸಿದರು. ಈ ಸಂಧರ್ಭದಲ್ಲಿ ಶ್ರೀಗಳು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಿಶ್ವನಾಥ ವಂಶಾಕೃತ ಮಠ ಸನ್ಮಾನಿಸಿದರು. ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಶ್ರೀ ಚನ್ನಪ್ಪ ಲೆಕ್ಕಿಹಾಳ, ಸಾಹಿತಿ ಸಿದ್ಧಲಿಂಗಪ್ಪ ಬೀಳಗಿ, ಪತ್ರಕರ್ತ ಪ್ರಕಾಶ ಗುಳೇದಗುಡ್ಡ, ಶ್ರೀನಿವಾಸ್ ಮಾರಾ, ಹೆಚ್.ಬಿ. ಕಂಬಳಿ, ಮಹಾಂತೇಶ್ ಬಂಡಿ, ಮಾನಪ್ಪ ಬಡಿಗೇರ ಇನ್ನಿತರರು ಉಪಸ್ಥಿತರಿದ್ದರು.