ಮಂಡ್ಯ : ಬೆಂಗಳೂರಿನ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ (ರಿ.) ಇದರ ವತಿಯಿಂದ ನೀಡುವ 2023ನೇ ಸಾಲಿನ ‘ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 09-06-2024ರಂದು ಬೆಳಗ್ಗೆ 10-00 ಗಂಟೆಗೆ ಮಂಡ್ಯದ ಸುಭಾಷ್ ನಗರ, ಶಿವ ನಂಜಪ್ಪ ಪಾರ್ಕ್ ಎದುರಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ಈ ಪ್ರಶಸ್ತಿಯನ್ನು ಚಾಮರಾಜ ನಗರದ ಸ್ವಾಮಿ ಪೊನ್ನಾಚಿಯವರ ‘ದಾರಿ ತಪ್ಪಿಸುವ ಗಿಡ’ ಕೃತಿಗೆ ಖ್ಯಾತ ಲೇಖಕರಾದ ಪ್ರೊ. ಕಾಳೇಗೌಡ ನಾಗವಾರ ಇವರು ಪ್ರದಾನ ಮಾಡಲಿರುವರು. ಪ್ರಶಸ್ತಿಯು ರೂ.25,000/- ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ವಿಮರ್ಶಕರಾದ ಶ್ರೀಮತಿ ಆರ್. ಸುನಂದಮ್ಮ ಪ್ರಶಸ್ತಿ ವಿಜೇತ ಕೃತಿಯ ಕುರಿತು ಮಾತನಾಡಲಿದ್ದು, ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಎಚ್.ಆರ್. ಸುಜಾತಾ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಎಂ.ಡಿ. ಪಲ್ಲವಿ ಮತ್ತು ಸಂಗಡಿಗರು ಭಾವಗಾಯನ ಕಾರ್ಯಕ್ರಮ ನೀಡಲಿದ್ದು, ಡಾ. ಬೆಸಗರಹಳ್ಳಿ ರಾಮಣ್ಣ ಅವರ ಅಂಕಣ ಬರಹಗಳ ಸಂಕಲನ ‘ಒರೆಗಲ್ಲು’ ಮರುಮುದ್ರಣವಾದ ಕೃತಿ ಬಿಡುಗಡೆಯಾಗಲಿದೆ.
ಸ್ವಾಮಿ ಪೊನ್ನಾಚಿ