ಕುಂದಾಪುರ: 2025ನೇ ಸಾಲಿನ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ತುಂಬಾಡಿ ರಾಮಯ್ಯ ಅವರ “ಜಾಲ್ಗಿರಿ” ಕಾದಂಬರಿಗೆ ಆಯ್ಕೆಯಾಗಿದೆ. ತಮ್ಮ ಆತ್ಮಕಥನ ‘ಮಣೆಗಾರ’ದ ಮೂಲಕ ಕನ್ನಡ ಓದುಗರಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿದ ತುಂಬಾಡಿಯವರ ಅನುಭವ ಪ್ರಪಂಚ ಬಹು ದೊಡ್ಡದು. ‘ಮಣೆಗಾರ’ ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು, ನಾಟಕವಾಗಿಯೂ ಜನಪ್ರಿಯವಾಗಿದೆ. ‘ಮುತ್ತಿನ ಜೋಳ ‘ ಮಣೆಗಾರ ಕೃತಿಯ ಮುಂದುವರಿದ ಭಾಗ. ‘ಸ್ಪರ್ಶ’ ಮತ್ತು ‘ದಲಿತಕಾರಣ’ ಅವರ ಲೇಖನಗಳ ಸಂಗ್ರಹವಾದರೆ, ‘ಓದೋ ರಂಗ ‘ ಮೊದಲ ಕಾದಂಬರಿ.
ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಬೆಳ್ಳಿಯ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಈ ಪ್ರಶಸ್ತಿ ಪ್ರದಾನವು 13 ಆಗಸ್ಟ್ 2025ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯಲಿರುವ ಸಾಹಿತ್ಯ ಸಮಾರಂಭದಲ್ಲಿ ನಡೆಯಲಿದೆ.
Subscribe to Updates
Get the latest creative news from FooBar about art, design and business.
Previous Articleಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 25
Next Article ಕವನ | ನಗುವಿನ ಹೂತೋಟ