ಕಾರ್ಕಳ : ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಕಾರ್ಕಳದಲ್ಲಿ ಆತ್ರೇಯಾ ಕ್ಲಿನಿಕ್ ನಡೆಸುತಿದ್ದ ಖ್ಯಾತ ವೈದ್ಯ ಡಾ. ಜಗದೀಶ್ ಪೈ ಇವರು 28 ಜುಲೈ 2025ರಂದು ನಿಧನ ಹೊಂದಿದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಕನ್ನಡ ಹಾಗೂ ಕೊಂಕಣಿ ಸಾಹಿತಿಯಾಗಿದ್ದ ಇವರು ರಾಷ್ಟ್ರೀಯ ಸ್ವಯಂ ಸೇವಕರಾಗಿದ್ದರು. ರಾಷ್ಟ್ರೀಯವಾದಿ ಲೇಖನ, ಹಾಸ್ಯ ಲೇಖನ, ವ್ಯಕ್ತಿತ್ವ ವಿಕಸನ ಕುರಿತು ಹಲವಾರು ಪುಸ್ತಕ ಪ್ರಕಟಿಸಿದ್ದ ಇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಡಾ. ನಂದಾ ಪೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.