ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹಯೋಗದಲ್ಲಿ ಡಾ. ಕೆ. ಶಿವರಾಮ ಕಾರಂತರ 123ನೇ ಜನ್ಮದಿನಾಚರಣೆ ಮತ್ತು ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 10 ಅಕ್ಟೋಬರ್ 2025 ಶುಕ್ರವಾರದಂದು ಮಧ್ಯಾಹ್ನ 4-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿಗಳಾದ ಡಾ. ಹೆಚ್.ಎಸ್. ಬಲ್ಲಾಳ್ ವಹಿಸಲಿದ್ದು, ಮಾಹೆಯ ಸಹಕುಲಪತಿಗಳಾದ ಡಾ. ನಾರಾಯಣ ಸಭಾಹಿತ್, ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿಕಿಶನ್ ಹೆಗ್ಡೆ ಉಪಸ್ಥಿತರಿರುವರು. ಕಾಪು ಸ.ಪ.ಪೂ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ರವಿರಾಜ್ ಶೆಟ್ಟಿ ಕಾರಂತ ಸಂಸ್ಮರಣೆಯನ್ನು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ್ ಅಳಗೋಡು ಇವರ ‘ಯಕ್ಷಗಾನ ಪೂರ್ವರಂಗ’ ಕೃತಿ ಬಿಡುಗಡೆಗೊಳ್ಳಲಿದೆ.
ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ಭೀಷ್ಮೋತ್ಪತ್ತಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ – ಭಾಗವತರು- ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ಶ್ರೀ ದರ್ಶನ್ ಗೌಡ ಗೋಳಿಕೆರೆ, ಮದ್ದಲೆ – ಎನ್.ಜಿ. ಹೆಗಡೆ ಯಲ್ಲಾಪುರ, ಚಂಡೆ – ಗುರುದತ್ ಪಡಿಯಾರ್, ಮುಮ್ಮೇಳದಲ್ಲಿ : ಶಂತನು – ಗಣೇಶ್ ನಾಯ್ಕ್ ಮುಗ್ವ, ಗಾಲವ – ಪ್ರತೀಶ್ ಕುಮಾರ್, ತಮಾಲಕೇತು -ಪ್ರಭಾಕರ ನಾಯ್ಕ್ ನಂಚಾರು, ಯೋಜನಗಂಧಿ -ಪ್ರದೀಪ್ ಶೆಟ್ಟಿ ನಾರ್ಕಳಿ, ಕಂದರ- ಹಳ್ಳಾಡಿ ಜಯರಾಮ ಶೆಟ್ಟಿ, ಮಂತ್ರಿ – ಡಾ. ಶಿವಕುಮಾರ್ ಅಳಗೊಡು, ದೇವವೃತ – ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಭಾಗವಹಿಸಲಿದ್ದಾರೆ.