ಧಾರವಾಡ : ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ (ರಿ.) ಕರ್ನಾಟಕ ಆಯೋಜಿಸುವ ಡಾ. ದಾ. ರಾ. ಬೇಂದ್ರೆ ಸದ್ಭಾವನಾ ಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ನೇ ಭಾನುವಾರದಂದು ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಭಾ ಭವನದಲ್ಲಿ ನಡೆಯಲಿದೆ.
ಶಿಕ್ಷಕಿ ಹಾಗೂ ಆಕಾಶವಾಣಿ ಕಲಾವಿದೆಯಾದ ಶ್ರೀಮತಿ ಸುಮಾ ಬಸವರಾಜ ಹಡಪದ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭವನ್ನು ಪತ್ರಕರ್ತ ಹಾಗೂ ಸಿನೆಮಾ ನಿರ್ಮಾಪಕರಾದ ಶ್ರೀ ಡಾ. ರಾಜು ಮೋರೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀ ಪರಮಪೂಜ್ಯ ಡಾ. ಅವದೂತ ಮಹರ್ಷಿ ಸಿದ್ದಾರ್ಥ ಸ್ವಾಮೀಜಿ ಉಪಸ್ಥಿತರಿದ್ದು, ಮನಸೂರಿನ ಶ್ರೀ ರೇವಣ ಸಿದ್ದೇಶ್ವರ ಮಠದ ಶ್ರೇ ಡಾ. ಬಸವರಾಜ ದೇವರು ಆಶೀರ್ವಚನ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸುಮಾ ಬಸವರಾಜ ಹಾಡಪದ ಇವರ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಧಾರವಾಡ, ಶ್ರೀಮತಿ ಜಯಶ್ರೀ ಪಾಟೇಲ್ ಶ್ರೀ ಕುಮಾರೇಶ್ವರ ನಗರ ಮಹಿಳಾ ಮಂಡಳಿ, ಶ್ರೀ ಬಸಯ್ಯ ಗಿಬನ್ನಿಗೋಳ ಮಠ ನಾಟ್ಯ ಲೋಕಕಲೆ ಹಾಗೂ ಸಾಂಸ್ಕೃತಿಕ ತಂಡ ಹುಬ್ಬಳ್ಳಿ, ಶ್ರೀಮತಿ ಸುಧಾ ಮತ್ತು ತಂಡ ಕಲ್ಪವೃಕ್ಷ ಮಹಿಳಾ ಮಂಡಳಿ, ಮೃಗಾಲಯ ಜೋಶಿ ಸಾಂಸ್ಕೃತಿಕ ಶಿಶು ಮಂದಿರ ಧಾರವಾಡ ಇವರುಗಳಿಂದ ಸಂಗೀತ ಕಾರ್ಯಕ್ರಮ ಬೆಂಗಳೂರಿನ ಕೊಳಲು ವಾದಕ ಶ್ರೀ ಪ್ರವೀಣ್ ಆಚಾರ್ ಕೆ. ಇವರಿಂದ ಕೊಳಲು ವಾದನ ಹಾಗೂ ಹೊಸಪೇಟೆಯ ಶ್ರೀ ಶೇಶಪ್ಪ ಇವರಿಂದ ಸುಡುಗಾಡ ಸಿದ್ದರ ಜನಪದ ಕೈಚಳಕ ಕಾರ್ಯಕ್ರಮ ನಡೆಯಲಿದೆ.