ಕುಂದಾಪುರ : ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ. ಎಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಗಳನ್ನು ಪರಿಗಣಿಸಲಿದ್ದು, 2021ರಿಂದ 2022ರ ಅವಧಿಯಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಪ್ರಕಾಶಕರು ಅಥವಾ ಲೇಖಕರು ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಮೇ 20ರೊಳಗೆ ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ -576201 ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಈಗಾಗಲೇ ಪ್ರಶಸ್ತಿ ಪಡೆದವರಿಗೆ ಅವಕಾಶವಿರುವುದಿಲ್ಲ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದ್ದು, 15,000 ರೂ.ಗಳೊಂದಿಗೆ ಬೆಳ್ಳಿ ಫಲಕ ನೀಡಲಾಗುವುದೆಂದು ಪ್ರಶಸ್ತಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.