ಚನ್ನರಾಯಪಟ್ಟಣ : ಈ ನಾಡು ಕಂಡ ಹೆಸರಾಂತ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ಇವರು ದಿನಾಂಕ 08 ಮಾರ್ಚ್ 2025ರಂದು ಬೆಳಗ್ಗೆ 9-00 ಗಂಟೆಗೆ ಪ್ರತಿಮಾ ಟ್ರಸ್ಟ್ (ರಿ.) ಇದರ ರಂಗ ಲೋಕಕ್ಕೆ ಭೇಟಿ ನೀಡಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನರಾಯಪಟ್ಟಣ ಪ್ರತಿಮಾ ಟ್ರಸ್ಟಿನ ಅಧ್ಯಕ್ಷರಾದ ಉಮೇಶ್ ತೆಂಕನಹಳ್ಳಿ ಇವರು ವಹಿಸಲಿದ್ದು, ಕಲಾವಿದರಾದ ಶ್ರೀಮತಿ ಸುಶೀಲ ರಾವ್ ಮತ್ತು ಶ್ರೀಮತಿ ರಮ ಇವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ನಮ್ಮ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳಾ ಕಲಾ ತಂಡದಿಂದ ಕೋಲಾಟ ಮತ್ತು ಜನಪದ ಸಮೂಹ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.