22.03.2023, ಮೈಸೂರು ಮತ್ತು ಹೊನ್ನಾವರ: ವಿಶ್ವ ರಂಗ ದಿನದ ಅಂಗವಾಗಿ ಮೈಸೂರು ಮತ್ತು ಹೊನ್ನಾವರದಲ್ಲಿ ಬಹುರೂಪಿ ಪ್ರಕಾಶನದ ಡಾ.ಶ್ರೀಪಾದ ಭಟ್ ಇವರ ರಂಗಪಯಣದ ಕಥನವಾದ ‘ದಡವ ನೆಕ್ಕಿದ ಹೊಳೆ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ದಿನಾಂಕ 26 ಮಾರ್ಚ್2023 ಭಾನುವಾರದಂದು ಸಂಜೆ ಗಂಟೆ 4.30ಕ್ಕೆ ನಟನ ರಂಗಮಂದಿರ ಮೈಸೂರಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಮೇಶ್ವರಿ ವರ್ಮ, ಬಿ. ಸುರೇಶ್, ದೀಪಾ ಹಿರೇಗುತ್ತಿ ಇವರೊಂದಿಗೆ ಕೃತಿಯ ಕರ್ತೃ ಡಾ. ಶ್ರೀಪಾದ ಭಟ್ ಇವರ ಉಪಸ್ಥಿತಿಯಲ್ಲಿ ಪ್ರಕಾಶ್ ರೈ ಇವರು ಕೃತಿ ಅನಾವರಣ ಮಾಡಲಿದ್ದಾರೆ. ಸಂಜೆ 6.30 ಕ್ಕೆ ಸರಿಯಾಗಿ ನಟನ ಪಯಣ: ರೆಪರ್ಟರಿ ತಂಡದ ಹೊಸಪ್ರಯೋಗ ಡಾ.ಶ್ರೀಪಾದ ಭಟ್ ವಿನ್ಯಾಸ ಮತ್ತು ನಿರ್ದೇಶನದ, ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯದ “ಕಣಿವೆಯ ಹಾಡು” ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಮಂಡ್ಯ ರಮೇಶ್ ಮತ್ತು ಜಿ. ಎನ್. ಮೋಹನ್ ಸರ್ವರಿಗೂ ಸ್ವಾಗತ ಬಯಸಿದ್ದಾರೆ.
27 ಮಾರ್ಚ್ 2023 ಸೋಮವಾರದಂದು ಸಂಜೆ 6 ಗಂಟೆಗೆ ಚಿಂತನ ರಂಗ ಅಧ್ಯಯನ ಕೇಂದ್ರ (ರಿ) ಆಶ್ರಯದಲ್ಲಿ ಹೊನ್ನಾವರದ ನಾಮಧಾರಿ ಸಭಾಭವನದಲ್ಲಿ ಹಿರಿಯ ಕಥೆಗಾರರಾದ ಡಾ. ಶ್ರೀಧರ ಬಳಗಾರ್ ಇವರಿಂದ “ದಡವ ನೆಕ್ಕಿದ ಹೊಳೆ” ಕೃತಿ ಲೋಕಾರ್ಪಣೆಗೊಳ್ಳಲಿದೆ. ಪುಸ್ತಕದ ಕುರಿತು ಕವಿಗಳಾದ ಮಾಧವಿ ಭಂಡಾರಿ ಕೆರೆಕೋಣ ಮಾತನಾಡಲಿದ್ದಾರೆ. ಕೃತಿ ಬಿಡುಗಡೆಯ ನಂತರ ವಿನಾಯಕ್ ಎಂ.ಎನ್.ಇವರಿಂದ ಮನಸ್ಸಿಗೆ ಮುದನೀಡುವ ಕಥಾಭಿನಯ ಮತ್ತು ರಂಗಗೀತೆಗಳಿವೆ. ಡಾ.ವಿಠ್ಠಲ ಭಂಡಾರಿ ಕೆರೆಕೋಣ ಇವರ ನೆನಪಿನೊಂದಿಗೆ ಸಂಘಟನೆಯ ಅಧ್ಯಕ್ಷರಾದ ಕಿರಣ್ ಭಟ್, ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ ಮತ್ತು ಖಜಾಂಚಿ ದಾಮೋದರ ನಾಯ್ಕ ಇವರು ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಬಯಸಿದ್ದಾರೆ.