ಹೊನ್ನಾವರ : ಪ್ರೀತಿ ಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪು -4 ಕಾರ್ಯಕ್ರಮವನ್ನು ದಿನಾಂಕ 04 ಮೇ 2025ರಂದು ಬೆಳಿಗ್ಗೆ 10-30 ಗಂಟೆಗೆ ಹೊನ್ನಾವರ ಕೆರೆಕೋಣ ಸಹಯಾನದ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10-00 ಗಂಟೆಗೆ ‘ನಮನ’ ಸ್ವಾಮಿ ಗಾಮನಹಳ್ಳಿ ಇವರಿಂದ ಹಾಡುಗಳು, ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಸಾಹಿತಿ ಕೃಷ್ಣ ನಾಯಕ ಇವರು ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಸಹಾಯಕ ಪ್ರಾಧ್ಯಾಪಕರಾದ ಡಾ. ಅನಸೂಯಾ ಕಾಂಬಳೆ ಇವರಿಂದ ‘ಜನಜೀವನ ಮತಧರ್ಮ ನಿರಪೇಕ್ಷತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಸಂಧ್ಯಾ ನಾಯ್ಕ, ಸುನೈಫ್ ವಿಟ್ಲ, ವಿಲ್ಸನ್ ಕಟೀಲು, ಚಿನ್ಮಯ ಹೆಗಡೆ, ಹೆಬಸೂರ ರಂಜಾನ್ ಇವರಿಂದ ಕಾವ್ಯ ಓದು ಪ್ರಸ್ತುತಗೊಳ್ಳಲಿದೆ. ‘ಅನ್ವೇಷಣೆ’ ಸಂಪಾದಕರಾದ ಆರ್.ಜಿ. ಹಳ್ಳಿ ನಾಗರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಸಮಕಾಲೀನ ಸಂವಾದ’ದಲ್ಲಿ ನ್ಯಾಯವಾದಿ ಪ್ರಕಾಶ ಉಡಿಕೇರಿ, ಸುರಭಿ ರೇಣುಕಾಂಬಿಕೆ ಮತ್ತು ಕಾರವಾರ ಕ.ಸಾ.ಪ.ದ ಅಧ್ಯಕ್ಷರಾದ ರಾಮಾ ನಾಯ್ಕ ಇವರು ಭಾಗವಹಿಸಲಿದ್ದಾರೆ. ಸಂಜೆ 4-30 ಗಂಟೆಗೆ ಅದಿತಿ, ಅಭಯ್ ಮತ್ತು ರೋಹನ್ ಇವರಿಂದ ನೃತ್ಯ-ಯಕ್ಷ ಹೆಜ್ಜೆಗಳು ಪ್ರಸ್ತುತಗೊಳ್ಳಲಿದೆ.