Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಜನಪ್ರಿಯ ನಾಟಕಕಾರ ಪೂಜಾರ್ ಚಂದ್ರಪ್ಪ ನಿಧನ 
    Drama

    ಜನಪ್ರಿಯ ನಾಟಕಕಾರ ಪೂಜಾರ್ ಚಂದ್ರಪ್ಪ ನಿಧನ 

    October 10, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅರಸೀಕೆರೆ: ಅರಸೀಕೆರೆ ಗ್ರಾಮದ ಜನಪ್ರಿಯ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್ ಚಂದ್ರಪ್ಪ ದಿನಾಂಕ 08 ಅಕ್ಟೋಬರ್ 2024ರ ಮಂಗಳವಾರದಂದು ನಿಧನರಾದರು. ಅವರಿಗೆ 76 ವರ್ಷ ವ್ಯಯಸ್ಸಾಗಿತ್ತು.

    ಪೂಜಾ‌ರ್ ಚಂದ್ರಪ್ಪ ಕೇವಲ ಎರಡನೇ ತರಗತಿ ಓದಿದ್ದರೂ ರಂಗಭೂಮಿ ಮತ್ತು ಸಂಗೀತದ ಅಪಾರ ಆಸಕ್ತಿ ಹೊಂದಿದ್ದರು. ‘ದಂಡಿನ ದುರ್ಗಮ್ಮ’ (ದುರ್ಗಮಾತಾ ಅವತಾರ) ನಾಟಕದಲ್ಲಿ ಮೊದಲ ಬಾರಿಗೆ ದೇವಿಯ ಪಾತ್ರ ನಿರ್ವಹಿಸಿದ್ದರು. ಇವರ ಈ ಪಾತ್ರ ಜನಪ್ರಿಯತೆ ಗಳಿಸಿ ನಾಟಕವು ರಾಜ್ಯದ ವಿವಿದೆಡೆಗಳಲ್ಲಿ 267 ಪ್ರದರ್ಶನ ಕಂಡಿತ್ತು. ‘ಜಗಜ್ಯೋತಿ ಬಸವೇಶ್ವರ’, ‘ದುರ್ಗದ ದೊರೆ ಅರ್ಥಾತ್ ರಾಜ್ಯದಲ್ಲಿ ಗಂಡುಗಲಿ’ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ನಾಟಕದಲ್ಲಿ ಇವರು ಮುಖ್ಯ ಪಾತ್ರ ನಿರ್ವಹಿಸಿದ್ದರು. ‘ಕೊಂಡು ತಂದ ಗಂಡ’, ‘ಹೆಜ್ಜೆ ತಪ್ಪದ ಹೆಣ್ಣು’, ‘ಗಂಡನ ಮಾನ’, ‘ಪತಿ ಭಕ್ತ’ ಸೇರಿದಂತೆ ಅನೇಕ ನಾಟಕದ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದರು.

    ‘ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ’, ‘ಗ್ರಾಮೀಣ ಸಿರಿ’, ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಗ್ರಾಮೀಣ ರಂಗ ಹಬ್ಬ’, ‘ಶ್ರೀ ಜಯದೇವ ಗೌರವ ಪುರಸ್ಕಾರ’, ‘ಪಂಚಮ ಶ್ರೀ’ ಹಾಗೂ ಅನೇಕ ಪ್ರಶಸ್ತಿ ಸನ್ಮಾನಗಳು ಇವರ ಸಾಧನೆಗೆ ಸಂದ ಗೌರವಗಳು. ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಾಜಕೀಯವಾಗಿಯೂ ಮನ್ನಣೆ ಗಳಿಸಿದ್ದ ಇವರು ತಾಲ್ಲೂಕು ಪಂಚಾಯಿತಿ ಸದಸ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪೂಜಾರ್ ಚಂದ್ರಪ್ಪ ಕುರಿತ ‘ಬಣ್ಣ ಮತ್ತು ಬದುಕು’ ಎಂಬ ಅಭಿನಂದನ ಗ್ರಂಥವೂ ರಚನೆಯಾಗಿದೆ.

    ಶ್ರೀಯುತರು ಪುತ್ರ, ಪ್ರಾಂಶುಪಾಲ ಪೂಜಾರ್ ದುರುಗೇಶ್, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಗುರುವನ ಶ್ರೀದುರ್ಗಾಕ್ಷೇತ್ರ ಕಡೆಕಾರಿನಲ್ಲಿ 50ನೇ ವರ್ಷದ ತಾಳಮದ್ದಳೆ ಸೇವೆ
    Next Article ಶ್ರೀ ಸುಬ್ರಹ್ಮಣ್ಯ ನಗರ ಮೈದಾನದ ವೇದಿಕೆಯಲ್ಲಿ ತಾಳಮದ್ದಳೆ ಕೂಟ
    roovari

    Add Comment Cancel Reply


    Related Posts

    ಸಮುದಾಯ ಬೆಂಗಳೂರು ಪ್ರಸ್ತುತ ಪಡಿಸುವ ‘ಭಗವಂತನ ಮರಣ’ ನಾಟಕ | ಫೆಬ್ರವರಿ 22 ಮತ್ತು 26

    February 20, 2026

    ಯಶಸ್ವಿಯಾಗಿ ಸಂಪನ್ನಗೊಂಡ ‘ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ’

    February 20, 2026

    ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ | ಫೆಬ್ರವರಿ 20

    February 20, 2026

    ಮೈಸೂರಿನಲ್ಲಿ ‘ಹುತ್ತದಲ್ಲಿ ಹುತ್ತ’ ಅಪೂರ್ವ ಹಾಸ್ಯ ನಾಟಕ ಪ್ರದರ್ಶನ | ಫೆಬ್ರವರಿ 22

    February 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.