ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ, ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಮತ್ತು ರಂಗಮಂಡಲ ಸಾಂಸ್ಕೃತಿಕ ಸಂಘ (ರಿ.) ಇವುಗಳ ಸಂಯುಕ್ತ ಆಯೋಜನೆಯಲ್ಲಿ ‘ಕಾಲೇಜು ವಿದ್ಯಾರ್ಥಿಗಳ ನಾಟಕ ಶಿಬಿರ’ದ ಉದ್ಘಾಟನೆಯನ್ನು ದಿನಾಂಕ 26 ಸೆಪ್ಟೆಂಬರ್ 2024ರಂದು ಮಧ್ಯಾಹ್ನ 1-30 ಗಂಟೆಗೆ ಬೆಂಗಳೂರಿನ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ಆಯೋಜಿಸಲಾಗಿದೆ.
ನಾಟಕ ಅಕಾಡಮಿಯ ಸದಸ್ಯರಾದ ಜಗದೀಶ್ ಜಾಲ ಇವರು ಈ ಶಿಬಿರದ ಉದ್ಘಾಟನೆ ಮಾಡಲಿದ್ದು, ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಇದರ ಪ್ರಾಂಶುಪಾಲರಾದ ಡಾ. ಜಯರಾಮ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯರಾದ ಎನ್.ರಮೇಶ್, ಹೆಚ್.ಎಸ್. ಸುಧೀಂದ್ರಕುಮಾರ್ ಹಾಗೂ ಕಲಾವಿದೆ ನಿರ್ಮಲಾ ನಾದನ್ ಇವರುಗಳು ಉದ್ಘಾಟನೆಯಲ್ಲಿ ನಮ್ಮೊಂದಿಗೆ ಭಾಗವಹಿಸಲಿದ್ದಾರೆ. ರಂಗಕರ್ಮಿ ಶಿಬಿರದ ನಿರ್ದೇಶಕರಾದ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಅಕಾಡಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಹಾಗೂ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ನಾಡೋಜ ವೂಡೇ ಪಿ. ಕೃಷ್ಣ ಮತ್ತು ಡಾ. ಜಯರಾಮ್ ಇವರು ನಾಟಕ ತಂಡ ‘ರಂಗಮಂಡಲ’ಕ್ಕೆ ಶಿಬಿರ ಮಾಡಿ ನಾಟಕ ನಿರ್ದೇಶಿಸಲು ಅನುವು ಮಾಡಿಕೊಟ್ಟಿದ್ದಾರೆ. ಮೂಡಲಪಾಯ ಯಕ್ಷಗಾನ ಕರಿರಾಜ ಚರಿತ್ರೆ (ಕರಿಭಂಟನ ಕಾಳಗ)ಯನ್ನು ಕಾಲೇಜಿನ ವಿದ್ಯಾರ್ಥಿಗಳು ಕಲಿಯಲು ಉತ್ಸಕರಾಗಿದ್ದಾರೆ. ಭಾಗವತ ಅರಳಗುಪ್ಪೆ ಪುಟ್ಟಸ್ವಾಮಿ ಇವರು ಯಕ್ಷಗಾನದ ಕುಣಿತಗಳನ್ನು ಕಲಿಸಲಿದ್ದಾರೆ. ‘ಕರಿರಾಜ’ ನವೆಂಬರ್ ಮೊದಲ ವಾರದಲ್ಲಿ ನಿಮ್ಮ ಮುಂದೆ ಬರಲಿದ್ದಾನೆ.