ಕೋಲಾರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ‘ಆದಿಮ ರಂಗಭೂಮಿ ಶಿಕ್ಷಣ ಕೇಂದ್ರ’ ಇದರ ವತಿಯಿಂದ ಡ್ರಾಮಾ ಡಿಪ್ಲೊಮಾ 2024-25 ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ (ಯುಜಿ ಡಿಪ್ಲೊಮಾ) ಸನಿವಾಸ ತರಗತಿಗಳು ಪ್ರಾರಂಭವಾಗಲಿದೆ. ಆದಿಮ ಸಾಂಸ್ಕೃತಿಕ ಕೇಂದ್ರವು ನೆಲ ಸಂಸ್ಕೃತಿ ನಡೆಯ ಭಾಗವಾಗಿ 18 ವರ್ಷಗಳಿಂದ ನಡಿಸಿದ ಪ್ರಯೋಗಗಳ ಹಿನ್ನೆಲೆಯಲ್ಲಿ ಒಂದು ವರ್ಷದ ಡ್ರಾಮಾ ಡಿಪ್ಲೊಮಾ ಕಾಲೇಜು ತೆರೆಯಲಾಗಿದೆ.
ಪಿ.ಯು.ಸಿ. / ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣಗಾಗಿರುವ 18ರಿಂದ 30 ವರ್ಷ ವಯೋಮಿತಿಯ ಅರ್ಹ ಅಭ್ಯರ್ಥಿಗಳು ಆದಿಮ ರಂಗಭೂಮಿ ಶಿಕ್ಷಣ ಕೇಂದ್ರ, ಶಿವಗಂಗೆ, ತೇರಹಳ್ಳಿ ಬೆಟ್ಟ, ಮಡೇರಹಳ್ಳಿ ಅಂಚೆ, ಕೋಲಾರ-563101, ಇಲ್ಲಿ ನಿಗದಿತ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಸಮಯದೊಳಗೆ ನೇರವಾಗಿ ಅಥವಾ ಅಂಚೆಯ ಮುಖಾಂತರ ಇಲ್ಲಿಗೆ ತಲಪಿಸತಕ್ಕದ್ದು. ಆಯ್ಕೆ ಪ್ರಕ್ರಿಯೆ ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಸಂದರ್ಶನದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು.
ರಂಗಭೂಮಿ / ಕಲೆಗಳಲ್ಲಿ ಆಸಕ್ತಿ ಇರುವವರಿಗೆ ಮೊದಲ ಆದ್ಯತೆ. ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನವು ದಿನಾಂಕ 15-07-2024ರಂದು ಆದಿಮ ರಂಗಭೂಮಿ ಶಿಕ್ಷಣ ಕೇಂದ್ರದಲ್ಲಿ ನಡೆಯಲಿದೆ.