Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಸಭಾದಲ್ಲಿ ಸಭೆಯ ಮನಗೆದ್ದ ನೃತ್ಯ ಮಾರ್ಗಂ

    February 4, 2026

    ‘ಕಾವ್ಯಾಂ ವ್ಹಾಳೊ- 11’ ಕೊಂಕಣಿ ಕವಿಗೋಷ್ಟಿ | ಫೆಬ್ರವರಿ 07

    February 4, 2026

    ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಾಟಕ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ

    February 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಾಟಕ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ
    Awards

    ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಾಟಕ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ

    February 4, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದ ಆಶ್ರಯದಲ್ಲಿ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಠಿತ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 01 ಫೆಬ್ರವರಿ 2026ರಂದು ಕೊಡಿಯಾಲ್ ಬೈಲ್ ನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಿತು.

    ಕೊಂಕಣಿಯ ಹಿರಿಯ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಇವರಿಗೆ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪ್ರಶಸ್ತಿ ಹಾಗೂ ಹಿರಿಯ ಕೊಂಕಣಿ ಅನುವಾದಕಿ ಮಾಯಾ ಅನಿಲ್ ಖರಂಗಟೆ ಇವರಿಗೆ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಫಲಕ ಸೇರಿದಂತೆ ತಲಾ ರೂ. ಒಂದು ಲಕ್ಷ ನಗದು ಒಳಗೊಂಡಿದೆ.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರು, “ನಾಟಕ ರಂಗದಲ್ಲಿ ಪ್ರೇಕ್ಷಕರಿಗೆ ಮನೋರಂಜನೆ ಸಿಗುತ್ತದೆ. ಆದರೆ, ಕಲಾವಿದರು ಹಾಗೂ ಬರಹಗಾರರು ಅನೇಕ ಸವಾಲು, ಸಂಕಷ್ಟಗಳನ್ನು ಎದುರಿಸುತ್ತಾರೆ. ವಿಶ್ವ ಕೊಂಕಣಿ ಕೇಂದ್ರ ಈ ಪ್ರಶಸ್ತಿ ನೀಡಿರುವುದು ನನಗೆ ಅಭಿಮಾನದ ವಿಚಾರ” ಎಂದರು. ಮಾಯಾ ಅನಿಲ್ ಖರಂಗಟೆ ಮಾತನಾಡಿ, “ನಾನು 50 ವರ್ಷಗಳಿಂದ ವಿವಿಧ ಸಾಹಿತ್ಯಗಳನ್ನು ಬರೆಯುತ್ತಿದ್ದೇನೆ. ಅನೇಕ ಪುರಸ್ಕಾರಗಳು ಸಿಕ್ಕಿವೆ. ಆದರೆ ಈ ಪ್ರಶಸ್ತಿ ಖುಷಿ ನೀಡಿದೆ” ಎಂದರು.

    ಡಾ. ಪಿ. ದಯಾನಂದ ಪೈ ಅವರು ವೀಡಿಯೋ ಮೂಲಕ ಸಂದೇಶ ನೀಡಿ, “ವಿಶ್ವ ಕೊಂಕಣಿ ಕೇಂದ್ರದ ಎಲ್ಲ ಕೆಲಸ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ” ಎಂದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿ, ಡಾ. ಕಸ್ತೂರಿ ಮೋಹನ್ ಪೈ ವಂದಿಸಿದರು. ಡಾ. ವಿಜಯಲಕ್ಷ್ಮೀ ನಾಯಕ, ಚೇತನಾ ನಾಯಕ್ ನಿರೂಪಿಸಿದರು. ಬಿ.ಆರ್. ಭಟ್, ರಮೇಶ್ ನಾಯಕ ಮೈರಾ, ವಿಲಿಯಂ ಡಿ’ಸೋಜಾ, ಪ್ರಶಾಂತ್ ಶೇಟ್, ಶಕುಂತಲಾ ಕಿಣಿ, ನಾರಾಯಣ ನಾಯ್ಕ್, ಗಿಲ್ಬರ್ಟ್ ಡಿ’ಸೋಜಾ, ಡಾ. ದೇವದಾಸ್ ಪೈ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗೋವಾದ ನಟರಂಗ ಕ್ರಿಯೇಷನ್ಸ್ ತಂಡದ ‘ಹೆಡೋನಿಸ್ಟ್’ ಕೊಂಕಣಿ ನಾಟಕವು ಪ್ರದರ್ಶನ ಹಾಗೂ ಕೊಲ್ಯದ ನಾಟ್ಯ ನಿಕೇತನ ವತಿಯಿಂದ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ ಇವರ ತಂಡದವರಿಂದ ‘ಪಾರಿಜಾತ ಫೂಲ್’ ಗೀತ ನೃತ್ಯ ನಾಟಕವೂ ಪ್ರದರ್ಶನಗೊಂಡಿತು.

    award baikady drama felicitation konkani Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಆನೆಗುಡ್ಡೆ ದೇಗುಲದಲ್ಲಿ ಪ್ರಸಿದ್ಧ ಅರ್ಥದಾರಿಗಳಿಂದ ‘ಅರ್ಥಾಂಕುರ’ | ಫೆಬ್ರವರಿ 05
    Next Article ‘ಕಾವ್ಯಾಂ ವ್ಹಾಳೊ- 11’ ಕೊಂಕಣಿ ಕವಿಗೋಷ್ಟಿ | ಫೆಬ್ರವರಿ 07
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಸಭಾದಲ್ಲಿ ಸಭೆಯ ಮನಗೆದ್ದ ನೃತ್ಯ ಮಾರ್ಗಂ

    February 4, 2026

    ‘ಕಾವ್ಯಾಂ ವ್ಹಾಳೊ- 11’ ಕೊಂಕಣಿ ಕವಿಗೋಷ್ಟಿ | ಫೆಬ್ರವರಿ 07

    February 4, 2026

    ಆನೆಗುಡ್ಡೆ ದೇಗುಲದಲ್ಲಿ ಪ್ರಸಿದ್ಧ ಅರ್ಥದಾರಿಗಳಿಂದ ‘ಅರ್ಥಾಂಕುರ’ | ಫೆಬ್ರವರಿ 05

    February 4, 2026

    ಬಳ್ಳಾರಿಯ ಕನ್ನಡ ಭವನದಲ್ಲಿ ಪುಸ್ತಕ ಲೋಕಾರ್ಪಣೆ | ಫೆಬ್ರುವರಿ 08

    February 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.