ಬೆಂಗಳೂರು : ಅನ್ ಬಾಕ್ಸಿಂಗ್ ಬೆಂಗಳೂರು ಮತ್ತು ಜಂಗಮ ಕಲೆಕ್ಟಿವ್ ಜೊತೆಯಾಗಿ ಅರ್ಪಿಸುವ ‘ನಾಟಕಗಳ ಹಬ್ಬ’ ದಿನಾಂಕ 04-12-2023ರಿಂದ 11-11-2023 ರ ವರೆಗೆ ಬೆಂಗಳೂರಿನ ವಿವಿಧೆಡೆ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 04-12-2023ರಂದು ಸಂಜೆ 7.30ಕ್ಕೆ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಮಂಗಳೂರಿನ ‘ಅಸ್ತಿತ್ವ’ ಪ್ರಸ್ತುತ ಪಡಿಸುವ ಅರುಣ್ ಲಾಲ್ ಕೇರಳ ಇವರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದ ನಾಟಕ ‘ಜುಗಾರಿ’ ಪ್ರದರ್ಶನಗೊಳ್ಳಲಿದೆ.
ದಿನಾಂಕ 06-12-2023ರಂದು ಸಂಜೆ 7.30ಕ್ಕೆ ಜೆ.ಸಿ.ರೋಡಿನ ನಯನ ಸಭಾಂಗಣದಲ್ಲಿ ಧಾರವಾಡದ ‘ಆಟ-ಮಾಟ’ ಪ್ರಸ್ತುತ ಪಡಿಸುವ ಮಹಾದೇವ ಹಡಪದ ಪರಿಕಲ್ಪನೆ ಮತ್ತು ನಿರ್ದೇಶನದ ‘ನಾ ರಾಜಗುರು’ ನಾಟಕದಲ್ಲಿ ವಿಶ್ವರಾಜ್ ನಿಜಗುಣ ರಾಜಗುರು ಅಭಿನಯಿಸಲಿದ್ದಾರೆ.
ದಿನಾಂಕ 07-12-2023ರಂದು ಸಂಜೆ 7.30ಕ್ಕೆ ಹನುಮಂತ ನಗರದ ಕೆ.ಹೆಚ್ ಕಲಾ ಸೌಧದಲ್ಲಿ ಮೈಸೂರಿನ ‘ನಟನ’ ಪ್ರಸ್ತುತ ಪಡಿಸುವ ‘ಕಣಿವೆಯ ಹಾಡು’ ಪ್ರದರ್ಶನಗೊಳ್ಳಲಿದ್ದು, ಡಾ. ಶ್ರೀಪಾದ್ ಭಟ್ ವಿನ್ಯಾಸ ಮತ್ತು ನಿರ್ದೇಶನದ ಈ ನಾಟಕಕ್ಕೆ ಸಂಗೀತ ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರದ್ದು.
ದಿನಾಂಕ 10-12-2023ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ಕೇಂದ್ರ ದೊಮ್ಮಲೂರು ಇಲ್ಲಿ ಬೆಂಗಳೂರಿನ ‘ಅಭಿನಯತರಂಗ’ ಪ್ರಸ್ತುತ ಪಡಿಸುವ ಶ್ವೇತಾ ಹೆಚ್.ಕೆ. ವಿನ್ಯಾಸ ಮತ್ತು ನಿರ್ದೇಶನದ ‘ಆಕ್ಸಿಡೆಂಟಲ್ ಡೆತ್ ಆಫ್ ನ್ ಅನಾರ್ಕಿಷ್ಟ್’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 11-12-2023ರಂದು ಸಂಜೆ 7.30ಕ್ಕೆ ಜೆ.ಸಿ.ರೋಡಿನಲ್ಲಿರುವ ನಯನ ಸಭಾಂಗಣದಲ್ಲಿ ‘ಆಕ್ಟ್ ರಿಯಾಕ್ಟ್’ ತಂಡ ಪ್ರಸ್ತುತ ಪಡಿಸುವ ಲಕ್ಷ್ಮಣ್ ಕೆ.ಪಿ. ರಂಗರೂಪ, ವಿನ್ಯಾಸ ಮತ್ತು ಮತ್ತು ನಿರ್ದೇಶನದ ‘ದ್ವೀಪ’ ನಾಟಕ ಪ್ರದರ್ಶನಗೊಳ್ಳಲಿದೆ.