ಬೆಂಗಳೂರು : ಪ್ರವರ ಥಿಯೇಟರ್ ಇದರ 12ನೇ ವಾರ್ಷಿಕೋತ್ಸವ ಪ್ರಯುಕ್ತ ಕಾಜಾಣ ಪ್ರಸ್ತುತ ಪಡಿಸುವ ನಾಟಕ ಪ್ರದರ್ಶನವನ್ನು ದಿನಾಂಕ 23 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ.
ಡಾ. ಎಸ್.ಎಲ್.ಎನ್. ಸ್ವಾಮಿ ಇವರ ರಚನೆ, ವಿನ್ಯಾಸ ಸಂಗೀತ ಮತ್ತು ನಿರ್ದೇಶನದಲ್ಲಿ ಪೌರಾಣಿಕ ದೃಶ್ಯ ಪ್ರಪಂಚದ ವಿಶಿಷ್ಟ ಅನಾವರಣ ಗೋಕುಲ ಸಹೃದಯನ ಅಸಾಮಾನ್ಯ ದೃಶ್ಯ ಸಂಪುಟ ಏಕವ್ಯಕ್ತಿ ಪೌರಾಣಿಕ ರಂಗ ಪ್ರಯೋಗ ‘ಪಂಚಗವ್ಯ’ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9880339669 ಮತ್ತು 8431803866 ಸಂಖ್ಯೆಯನ್ನು ಸಂಪರ್ಕಿಸಿರಿ.