Subscribe to Updates

    Get the latest creative news from FooBar about art, design and business.

    What's Hot

    ಚಿತ್ರದುರ್ಗದಲ್ಲಿ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ | 27 ಜುಲೈ

    July 26, 2025

    ಕುರುಡಪದವು ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಔಚಿತ್ಯ ಪೂರ್ಣ ಉದ್ಘಾಟನೆ

    July 26, 2025

    ಯಶಸ್ವಿಯಾಗಿ ನಡೆದ 110ನೇಯ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮ

    July 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ | ಮಾಯದ ಗಾಯಗಳನ್ನು ಮರೆಸಿದ ನಾಟಕ
    Drama

    ನಾಟಕ ವಿಮರ್ಶೆ | ಮಾಯದ ಗಾಯಗಳನ್ನು ಮರೆಸಿದ ನಾಟಕ

    October 1, 20231 Comment2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರಿನ ಹಲವಾರು ರಂಗ ಸಂಘಟನೆಗಳು ಜೊತೆಯಾಗಿ, ಸಂತ ಅಲೋಷಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ‘ಗಾಯಗಳು’ ಎಂಬ ಸುಂದರ ನಾಟಕ ಪ್ರದರ್ಶನವನ್ನು ದಿನಾಂಕ 28-09-2023ರಂದು ಆಯೋಜನೆ ಮಾಡಿದ್ದರು. ಶ್ರೀರಂಗಪಟ್ಟಣದ ‘ನಿರ್ದಿಗಂತ’ ನಾಟಕ ತಂಡ ಅಭಿನಯಿಸಿದ ಈ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ಖ್ಯಾತ ರಂಗ ನಿರ್ದೇಶಕರಾದ ಡಾ.ಶ್ರೀಪಾದ ಭಟ್ ಅವರದ್ದು.

    ಗಾಯಗಳು ರಂಗಪ್ರಯೋಗ ಆಳವಾದ ಅನುಭವ ನೀಡಿದ ನಾಟಕ. ಒಂದೇ ನಾಟಕದೊಳಗೆ ನಾಲ್ಕು ಕತೆಗಳಿವೆ ನಾಲ್ಕೂ ಮನಸ್ಸಿಗಾದ ಗಾಯದ ಕತೆಗಳು.  ದೇಶದ ಯುದ್ಧಕ್ಕಾಗಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿ, ಅವರು ಹಿಂದಿರುಗಿ ಬರುತ್ತಾರೋ, ಇಲ್ಲವೋ ಎಂದು ಕಾಯುತ್ತಾ ಪರಿತಪಿಸುವ ತಂದೆ ತಾಯಂದಿರು. ತಮ್ಮ ಮಕ್ಕಳನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದೇವೆ ಎಂದು ಗರ್ವದಿಂದ ಎದೆ ಉಬ್ಬಿಸಿಕೊಳ್ಳುತ್ತಲೇ ಒಳಗೊಳಗೇ ಕೊರಗುವ ನೋವನ್ನು ಅನುಭವಿಸುವ ಪೋಷಕರು. ಮಹಾಭಾರತದ ಸ್ಮಶಾನ ಕುರುಕ್ಷೇತ್ರ ಪ್ರಸಂಗದಲ್ಲಿ ಸತ್ತು ಹೋದ ತಮ್ಮ ಮಕ್ಕಳನ್ನು ಹುಡುಕುತ್ತಿರುವ ಕೌರವ ಮತ್ತು ಪಾಂಡವ ಪಡೆಯ ಪೋಷಕರು ತಮ್ಮ ಮಕ್ಕಳ ಹೆಣವನ್ನು ಕಂಡಾಗ ನೋವಿಗೆ ದುಃಖಕ್ಕೆ ಪಕ್ಷ ಬೇಧ ಇರಲಿಲ್ಲ. ಸಾದತ್ ಹಸನ್ ಮಾಂಟೋ, ಬರೆದ ವಿಭಜನೆಯ ಕಥೆಗಳಿಂದ ಆಯ್ದ ಆ ಒಂದು ಕಥೆ. ಅದನ್ನು ನೋಡಿದಾಗ ಉತ್ತರವಿಲ್ಲದೆ ಉಳಿಯಬೇಕಾಗುತ್ತದೆ. ಹಿಂಸೆ ಮತ್ತಷ್ಟು ಹಿಂಸೆಗೆ ಪ್ರಚೋದನೆ ನೀಡುತ್ತದೆ ಎಂಬುದನ್ನು ಆ ಕಥೆ ಗಾಢವಾಗಿ ಹೇಳಿತು. ಕೊನೆಯದ್ದು ಟಿಪ್ಪುವಿನ ಸೈನ್ಯದ ದಳವಾಯಿಯೊಬ್ಬನ ಕಥೆ . ಯುದ್ಧ ಗೆದ್ದಾಗ  ಎಲ್ಲ ಸೈನಿಕರು ಒಂದೇ ರೀತಿ ಲೂಟಿ ಮಾಡುತ್ತಾರೆ ಎಂಬ ಮಾತು ಕ್ರೌರ್ಯದ ಇನ್ನೊಂದು ಮುಖವನ್ನು ತೋರಿಸಿದಂತಿತ್ತು.

    ಆದರೆ ಈ ಎಲ್ಲ ಗಾಯಗಳನ್ನು ಅನುಭವಿಸುವವರು ಯುದ್ಧದಲ್ಲಿ ಉಳಿದವರು ಹಾಗೂ ಅವರ ಮನೆಯವರು,  ಮಡದಿ ಮಕ್ಕಳು. ಪ್ರಭುತ್ವಕ್ಕೆ ಈ ನೋವು ತಟ್ಟುವುದಿಲ್ಲ. ಈ ನೋವಿನ ಗಾಯಗಳನ್ನು ನಾವು ಮಾಗಿಸಬೇಕಿದೆ ನಮ್ಮ ನಡುವಿನ ಈ ಕಸವನ್ನು ಗುಡಿಸಿ ಸ್ವಚ್ಛಗೊಳಿಸಬೇಕಿದೆ ಎಂಬ ಅರ್ಥದ ನಾಟಕ ಮನಮುಟ್ಟಿತ್ತು. ಕಸಗುಡಿಸುವ ಇಬ್ಬರು ಹುಡುಗರ ನಿರೂಪಣೆಯಲ್ಲಿ ಸೊಗಸಾಗಿ ಸಾಗುವ ಈ ನಾಟಕ ಮತ್ತು ನಟರ ಅಭಿನಯ ಬಹಳ ದಿನ ಮನದಲ್ಲಿ ಉಳಿಯುವಂತದ್ದು. ನಾವೆಲ್ಲರೂ ದ್ವೇಷ ಎಂಬ ಕಸವನ್ನು ಗುಡಿಸಿ ಸ್ವಚ್ಛಗೊಳಿಸಬೇಕಿದೆ, ಜೊತೆಯಾಗಿ ಬಾಳಬೇಕಿದೆ, ದ್ವೇಷ ಹಿಂಸೆ ಮತ್ತಷ್ಟು ಹಿಂಸೆಗೆ ಪ್ರಚೋದನೆ ಕೊಡುತ್ತದೆ. ಗಾಯಗಳನ್ನು ಮತ್ತೆ ಕೆದಕುವುದು ಎಷ್ಟು ಸರಿ ಇಂದು ನಾವು ಜೊತೆಯಾಗಿ ಬದುಕುವ ದಾರಿಯನ್ನು ಕಂಡುಕೊಳ್ಳಬೇಕಿದೆ ಎಂಬ ಮಾತು ನಾಟಕವನ್ನು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.

    ನಾಟಕಕ್ಕೆ ಸಹ ನಿರ್ದೇಶಕಿಯಾಗಿ ಶ್ವೇತಾರಾಣಿ ಹಾಸನ, ಸಂಗೀತದಲ್ಲಿ ಅನುಷ್ ಶೆಟ್ಟಿ, ಮುನ್ನ, ಸುನ್ನತ ಮೈಸೂರು ಹಾಗೂ ಕಲೆಯಲ್ಲಿ ಖಾಜು ಗುತ್ತಲ ಸಹಕರಿಸಿದ್ದಾರೆ.

    • ಅರವಿಂದ ಕುಡ್ಲ, ಅಧ್ಯಾಪಕರು, ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ,
      ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ಛಾಯಾಚಿತ್ರ ಕ್ಷೇತ್ರದ ಸಾಧಕ ಹಲವು ಪ್ರಶಸ್ತಿಗಳ ಸರದಾರ ಕೌಟಿಲ್ಯ ಅವಾರ್ಡ್ಸ್ ವಿಜೇತ ನಿತೀಶ್ ಪಿ. ಬೈಂದೂರು
    Next Article ಕಾಸರಗೋಡಿನಲ್ಲಿ ಪುರಾತನ ಕಲಾಕೃತಿ, ಕರಕುಶಲ ವಸ್ತು ಮತ್ತು ಚಿತ್ರಕಲೆಗಳ ಪ್ರದರ್ಶನ
    roovari

    1 Comment

    1. Chandrahasa Ullal on October 1, 2023 6:34 pm

      ನಾಟಕ ನನಗೂ ತುಂಬಾ ಇಷ್ಟ ಆಯ್ತು..ನಾಟಕದ ಬಗೆಗಿನ ನಿಮ್ಮ ಲೇಖನವೂ ಇಷ್ಟವಾಯಿತು..
      ತುಂಬಾ ದಿನಗಳ ನಂತರ ಒಂದೊಳ್ಳೆ ಪ್ರದರ್ಶನ ನೋಡುವಂತಾಯಿತು. ಸಂತ ಅಲೋಸಿಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಅಸ್ತಿತ್ವ ,ಕ್ರಿಸ್ತಿಯ ಬಳಗ ಎಲ್ಲರಿಗೂ ಅಭಿನಂದನೆಗಳನ್ನು ಹೇಳಲೇಬೇಕು..
      ರಂಗ ಮಂದಿರ ತಕ್ಕಮಟ್ಟಿಗೆ ಹೊಸ ರೂಪ ಪಡೆದಿರುವುದು ಮತ್ತು ಬೆಳಕು ಹಾಗೂ ಧ್ವನಿವರ್ಧಕದ ಶಾಶ್ವತ ವ್ಯವಸ್ಥೆ ಮಾಡಿರುವುದು ಮಂಗಳೂರಿನ ಪ್ರಾಯೋಗಿಕ ರಂಗಭೂಮಿಯ ರಂಗಕರ್ಮಿಗಳಿಗೆ ಒಂದು ಸಮಾಧಾನದ ನಿಟ್ಟಿಸಿರು ಬಿಡುವಂತಾಗಿರುವುದು ಅಷ್ಟೇ ಸತ್ಯ ..ದೊಡ್ಡ ಸಭಾಂಗಣದಲ್ಲಿ ಈ ರೀತಿಯ ಪ್ರಾಯೋಗಿಕ ನಾಟಕಗಳು ಪ್ರೇಕ್ಷಕರಿಗೆ ತಲುಪುವುದು ತುಸು ಕಷ್ಟವೇ..ಹಾಗಾಗಿ ಈ ರಂಗ ಮಂದಿರ ನಮ್ಮಂತ ಬಡ ರಂಗಕರ್ಮಿಗಳಿಗೆ ಆಶಾಕಿರಣವನ್ನು ಮೂಡಿಸಿದೆ..

      Reply

    Add Comment Cancel Reply


    Related Posts

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಗುಲಾಬಿ ಗ್ಯಾಂಗು’ ಭಾಗ -3 | ಜುಲೈ 30

    July 26, 2025

    ‘ಅಂತರಂಗ ಬಹಿರಂಗ’ ದಿಂದ ಒಂದೇದಿನ 2 ನಾಟಕಗಳ ಪ್ರದರ್ಶನ | ಜುಲೈ 27

    July 25, 2025

    ಕರ್ನಾಟಕ ನಾಟಕ ಆಕಾಡಮಿಯ ಪ್ರಶಸ್ತಿ ಪ್ರಕಟ

    July 25, 2025

    ಕಿನ್ನರ ಮೇಳ ರಂಗಶಾಲೆಯಿಂದ ‘ರಂಗಶಿಕ್ಷಣ ತರಗತಿ’ | ಆಗಸ್ಟ್ 2025– ಮಾರ್ಚ್ 2026

    July 25, 2025

    1 Comment

    1. Chandrahasa Ullal on October 1, 2023 6:34 pm

      ನಾಟಕ ನನಗೂ ತುಂಬಾ ಇಷ್ಟ ಆಯ್ತು..ನಾಟಕದ ಬಗೆಗಿನ ನಿಮ್ಮ ಲೇಖನವೂ ಇಷ್ಟವಾಯಿತು..
      ತುಂಬಾ ದಿನಗಳ ನಂತರ ಒಂದೊಳ್ಳೆ ಪ್ರದರ್ಶನ ನೋಡುವಂತಾಯಿತು. ಸಂತ ಅಲೋಸಿಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಅಸ್ತಿತ್ವ ,ಕ್ರಿಸ್ತಿಯ ಬಳಗ ಎಲ್ಲರಿಗೂ ಅಭಿನಂದನೆಗಳನ್ನು ಹೇಳಲೇಬೇಕು..
      ರಂಗ ಮಂದಿರ ತಕ್ಕಮಟ್ಟಿಗೆ ಹೊಸ ರೂಪ ಪಡೆದಿರುವುದು ಮತ್ತು ಬೆಳಕು ಹಾಗೂ ಧ್ವನಿವರ್ಧಕದ ಶಾಶ್ವತ ವ್ಯವಸ್ಥೆ ಮಾಡಿರುವುದು ಮಂಗಳೂರಿನ ಪ್ರಾಯೋಗಿಕ ರಂಗಭೂಮಿಯ ರಂಗಕರ್ಮಿಗಳಿಗೆ ಒಂದು ಸಮಾಧಾನದ ನಿಟ್ಟಿಸಿರು ಬಿಡುವಂತಾಗಿರುವುದು ಅಷ್ಟೇ ಸತ್ಯ ..ದೊಡ್ಡ ಸಭಾಂಗಣದಲ್ಲಿ ಈ ರೀತಿಯ ಪ್ರಾಯೋಗಿಕ ನಾಟಕಗಳು ಪ್ರೇಕ್ಷಕರಿಗೆ ತಲುಪುವುದು ತುಸು ಕಷ್ಟವೇ..ಹಾಗಾಗಿ ಈ ರಂಗ ಮಂದಿರ ನಮ್ಮಂತ ಬಡ ರಂಗಕರ್ಮಿಗಳಿಗೆ ಆಶಾಕಿರಣವನ್ನು ಮೂಡಿಸಿದೆ..

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.