ಬೆಳಗಾವಿ : ಸಂಸ್ಕೃತಿ ಸಚಿವಾಲಯ ನವ ದೆಹಲಿ ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ.) ಸವದತ್ತಿ ಇವರ ಆಶ್ರಯದಲ್ಲಿ ‘ರಂಗ ತರಬೇತಿ ಶಿಬಿರ’ವನ್ನು ದಿನಾಂಕ 01 ಡಿಸೆಂಬರ್ 2025ರಿಂದ 24 ಜನವರಿ 2026ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಸವದತ್ತಿ ಭಗೀರಥ ಸರ್ಕಲ್ ನಾಟಕ ಮನೆಯಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿವಾನಂದ ತಾರಿಹಾಳ 9449795232 ಮತ್ತು ಶ್ರೀನಿವಾಸ ಗದಗ 9945808391 ಸಂಖ್ಯೆಯನ್ನು ಸಂಪರ್ಕಿಸಿರಿ.

