ಉತ್ತರ ಕನ್ನಡ: ಸಂಸ್ಕಾರ ಭಾರತಿ ಉತ್ತರ ಕನ್ನಡ ಆಯೋಜಿಸುವ ಚಿತ್ರಕಲೆ ಹಾಗೂ ರಂಗೋಲಿ ಶಿಬಿರ, ರಾಜ್ಯ ಮಟ್ಟದ ವಿಶೇಷ ಕಲಾವಿದರದ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 10 ಸೆಪ್ಟೆಂಬರ್ 2025ರ ಬುಧವಾರದಂದು ಗೋಕರ್ಣದ ಓಂ ಬೀಟ್ ರಸ್ತೆಯಲ್ಲಿರುವ ವೀರಶೈವ ಸಮುದಾಯ ಭವನ ಯಾತ್ರಿ ನಿವಾಸದಲ್ಲಿ ನಡೆಯಲಿದೆ.
ಪ್ರಸಿದ್ಧ ಯಕಗಾನ ಕಲಾವಿದರು ಹಾಗೂ ಸಂಸ್ಕಾರ ಭಾರತಿ ಉತ್ತರ ಪ್ರಾಂತದ ಉಪಾಧ್ಯಕ್ಷರಾದ ಶ್ರೀ ಶಿವಾನಂದ ಹೆಗಡೆ ಕೆರೆಮನೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ತಬಲಾ ವಾದಕರಾದ ಶ್ರೀ ಸಂಜೀವ ಪೋತದಾರ ಹಾಗೂ ಡಾ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪುರಸ್ಕಾರ ಪುರಸ್ಕೃತ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಶ್ರೀ ವಿನಾಯಕ ಮುತ್ಮುರ್ಡು ಇವರನು ಸನ್ಮಾನಿಸಲಾಗುವುದು.
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು +91 72041 50918 / 9945152815 ಈ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು. ಮೊದಲು ಹೆಸರು ನೋಂದಾಯಿಸಿದವರಿಗೆ ಮೊದಲ ಆದ್ಯತೆ.
ಮಧ್ಯಾಹ್ನದ ಭೋಜನ ವ್ಯವಸ್ಥೆ ಹಾಗೂ ಕಾರ್ಯಕ್ರಮ ಮುಗಿದ ಸಂತರ ಪಾನೀಯ ವ್ಯವಸ್ಥೆ ಇರುತ್ತದೆ.
Subscribe to Updates
Get the latest creative news from FooBar about art, design and business.