ಮಡಿಕೇರಿ: ಮಕ್ಕಳ ದಿನಾಚರಣೆಯ ಪ್ರಯುಕ್ತ ಮಡಿಕೇರಿ ನಗರದ ಮಹದೇವಪೇಟೆಯ ಎಸ್. ಎಸ್. ಆಸ್ಪತ್ರೆ ವತಿಯಿಂದ ಎಲ್‌ಕೆಜಿ ಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 17 ನವೆಂಬರ್ 2024ರಂದು ಆಯೋಜಿಸಲಾಗಿದೆ.
ಆಸ್ಪತ್ರೆಯ ಸಮೀಪದಲ್ಲಿರುವ ಕ್ರೆಸೆಂಟ್ ಸ್ಕೂಲ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಸ್ಪರ್ಧೆ ನಡೆಯಲಿದ್ದು, 8.30 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಶಿಲ್ಪ ಸತೀಶ್ ಮನವಿ ಮಾಡಿದ್ದಾರೆ.
ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ‘ಮೂರೂ ವಿಭಾಗಗಳಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಆಕರ್ಷಕ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರ ಮತ್ತು ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು.
ಹೆಸರು ನೋಂದಾಯಿಸಿಕೊಳ್ಳುವವರು 8431285500, 8861965242 ಸಂಪರ್ಕಿಸಬಹುದಾಗಿದೆ.
Subscribe to Updates
Get the latest creative news from FooBar about art, design and business.
ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ | ನವೆಂಬರ್ 17
Previous Articleರಾಮ ಸಾಂಗತ್ಯ ಕೃತಿ ಪ್ರಸ್ತುತಿ
Next Article ಸಮಾರೋಪಗೊಂಡ ಚಿಟ್ಟಾಣಿ ಸಪ್ತಾಹ ಸಮಾರಂಭ.