Subscribe to Updates

    Get the latest creative news from FooBar about art, design and business.

    What's Hot

    ಕಡಲತಡಿಯ ಮನೆ ‘ಕನಸು’ವಿನಲ್ಲಿ ‘ವರ್ಷ ವೈಭವ’ ಸಾಹಿತ್ಯ ಕಾರ್ಯಕ್ರಮ

    June 28, 2025

    ಅರೆಭಾಷೆ ಕಥೆ, ಅಜ್ಜಿ ಕಥೆ, ಲೇಖನ, ಸಾಹಿತ್ಯ, ಲಲಿತ ಪ್ರಬಂಧ, ಕೃತಿಗಳ ಆಹ್ವಾನ | ಜುಲೈ 31

    June 28, 2025

    ಕೊಯ್ಯರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಉಪನ್ಯಾಸ-1

    June 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬಿ. ಜಿ. ಎಂ. ಆರ್ಟ್ ಟ್ರಸ್ಟ್‌ ವತಿಯಿಂದ ಚಿತ್ರಕಲಾ ಸ್ಪರ್ಧೆ| ಜನವರಿ 05
    Competition

    ಬಿ. ಜಿ. ಎಂ. ಆರ್ಟ್ ಟ್ರಸ್ಟ್‌ ವತಿಯಿಂದ ಚಿತ್ರಕಲಾ ಸ್ಪರ್ಧೆ| ಜನವರಿ 05

    December 30, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಚಿತ್ರಕಲಾ ಗುರು ದಿ. ಬಿ. ಜಿ. ಮುಹಮ್ಮದ್ ಇವರ 104ನೆ ಜನ್ಮದಿನಾಚರಣೆ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯು ದಿನಾಂಕ 05 ಜನವರಿ 2025 ರಂದು ಮಂಗಳೂರಿನ ಮಿನಿ ಪುರಭವನದಲ್ಲಿ ನಡೆಯಲಿದೆ.

    ಚಿತ್ರಕಲಾ ಸ್ಪರ್ಧೆಯು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಶಾಲಾ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಬೆಳಗ್ಗೆ ಘಂಟೆ 9.30 ರಿಂದ 11.30 ರವರೆಗೆ ನಡೆಯಲಿದ್ದು, 2 ರಿಂದ 4ನೇ ತರಗತಿಯವರಿಗೆ ಯಾವುದೇ ವಿಷಯದಲ್ಲಿ, 5ರಿಂದ 7ನೇ ತರಗತಿಯವರಿಗೆ ವಿಷಯ ‘ಸವಿ ನೆನಪು’ ಹಾಗೂ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಜಿಲ್ಲೆಯ ಸಂಸ್ಕೃತಿ’ ಬಗ್ಗೆ ಚಿತ್ರ ರಚಿಸಲು ತಿಳಿಸಲಾಗಿದೆ. ಅದೇ ದಿನ ಬಹುಮಾನ ವಿತರಣೆಯೂ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಗಣೇಶ ಸೋಮಯಾಜಿ ತಿಳಿಸಿದ್ದಾರೆ.

    ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ಪ್ರತಿ ವಿಭಾಗದಲ್ಲಿ 8 ಮಂದಿ ವಿಜೇತರಂತೆ 24 ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ಆರ್ಟಿಸ್ಟ್ ಕಂಬೈನ್‌ ಅಧ್ಯಕ್ಷ ಟ್ರೆವರ್ ಪಿಂಟೊ ಸ್ಪರ್ಧೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಜಿಲ್ಲಾಧಿಕಾರಿ ಅವರ ಪತ್ನಿ ಎ. ಆರ್. ಅಶ್ವಿನಿ ಮಣಿ ಹಾಗೂ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ರಶ್ಮಿ ಎಸ್. ಆರ್. ಭಾಗವಹಿಸುವರು. ಹಿರಿಯ ಕಲಾವಿದ ಹಾಗೂ ಶೇವ್‌ಗೂರ್ ಕಲಾ ಶಾಲೆಯ ಸ್ಥಾಪಕಾಧ್ಯಕ್ಷರಾದ ವಿಷ್ಣು ಶೇವ್‌ಗೂರ್ ಅಧ್ಯಕ್ಷತೆ ವಹಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ‘ವರ್ಣಾಂಜಲಿ 2024’ ಚಿತ್ರಕಲಾ ಸ್ಪರ್ಧೆ
    Next Article ವಿಶೇಷ ಲೇಖನ – ಪಡುಕೋಣೆ ರಮಾನಂದ ರಾಯರು
    roovari

    Add Comment Cancel Reply


    Related Posts

    ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಸಮಾರಂಭ | ಜೂನ್ 28

    June 27, 2025

    ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

    June 26, 2025

    ಕಣವಿ ಕಾವ್ಯ – ಕಥಾ ಸ್ಪರ್ಧೆಯಲ್ಲಿ ಮಧು ಕಾರಗಿ – ದಿವ್ಯಶ್ರೀಗೆ ಬಹುಮಾನ

    June 26, 2025

    ‘ರಕ್ತದಾನದ ಮಹತ್ವ’ ಕಥಾ ಸ್ಪರ್ಧೆ | ಜುಲೈ30

    June 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.