ಮಂಗಳೂರು : ಶ್ರೀ ಅಯ್ಯಪ್ಪ ಮಂದಿರ (ರಿ.) ಕಾಪಿಗುಡ್ಡ ಆಕಾಶಭವನ ಕಾವೂರು ಮಂಗಳೂರು ಇದರ 28ನೇ ವಾರ್ಷಿಕೋತ್ಸವದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 21 ಡಿಸೆಂಬರ್ 2025ರಂದು ಸಂಜೆ 3-00 ಗಂಟೆಗೆ ಅಯ್ಯಪ್ಪ ಮಂದಿರದಲ್ಲಿ ಆಯೋಜಿಸಲಾಗಿದೆ.
ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯು ನಡೆಯಲಿದ್ದು, ತರಗತಿ 1ರಿಂದ 3 – ಐಚ್ಚಿಕ, ತರಗತಿ 4ರಿಂದ 7 ‘ನಮ್ಮ ಹಬ್ಬಗಳು’ ಮತ್ತು ತರಗತಿ 8ರಿಂದ 10 ‘ತುಳುನಾಡ ಸಂಸ್ಕೃತಿ’ ಎಂಬ ವಿಷಯಗಳಲ್ಲಿ ಚಿತ್ರ ರಚನೆ ಮಾಡಬಹುದು. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ ಲೋಹಿತ್ – 98444663861, ಹರೀಶ್ – 9964143032 ಮತ್ತು ವಿಶ್ವನಾಥ್ – 9980311029 ಸಂಖ್ಯೆಗಳನ್ನು ಸಂಪರ್ಕಿಸಿರಿ.

