ಮಂಗಳೂರು : ಶರಧಿ ಪ್ರತಿಷ್ಠಾನ (ರಿ.) ಮಂಗಳೂರು ಆಯೋಜಿಸುವ ‘ಕಲಾಪರ್ಬ’ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳದಲ್ಲಿ ‘ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ’ಯನ್ನು ದಿನಾಂಕ 10 ಜನವರಿ 2026ರಂದು ಮಧ್ಯಾಹ್ನ 3-30ರಿಂದ 5-30ರವರೆಗೆ ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ.
2ರಿಂದ 4ನೇ ತರಗತಿ, 5ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ಹಾಗೂ ಕಾಲೇಜು ವಿಭಾಗ ಈ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದ ಜೊತೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಅಭಿನಂದನಾ ಪತ್ರ ಮತ್ತು ಪದಕ ನೀಡಲಾಗುವುದು. ಸ್ಪರ್ಧೆಯ ವಿಷಯ : 2ರಿಂದ 4ನೇ ತರಗತಿ : ಸೂರ್ಯೋದಯ, 5ರಿಂದ 7ನೇ ತರಗತಿ : ವನ್ಯಜೀವಿ, 8ರಿಂದ 10ನೇ ತರಗತಿ : ಪ್ರಕೃತಿ / ಸಂಸ್ಕೃತಿ, ಕಾಲೇಜು ವಿಭಾಗ : ತುಳುನಾಡಿನ / ಪದ್ಧತಿ
ಭಾಗವಹಿಸಲಿರುವ ವಿದ್ಯಾರ್ಥಿಗಳು ಮಧ್ಯಾಹ್ನ ಗಂಟೆ 2-30ಕ್ಕೆ ಹಾಜರಿರಬೇಕು. ಶಾಲಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಡ್ರಾಯಿಂಗ್ ಶೀಟನ್ನು ನೀಡಲಾಗುವುದು ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. ಸ್ಪರ್ಧಾ ಸಮಯ : 2-00 ಗಂಟೆ. ಪ್ರಥಮ : 5000/-, ದ್ವಿತೀಯ : 3000/- ಮತ್ತು ತೃತೀಯ : 2000/- ನಗದು ಬಹುಮಾನವಿದ್ದು, 10 ಜನವರಿ 2026ರಂದು ಶನಿವಾರ ಮಧ್ಯಾಹ್ನ ಗಂಟೆ 3-30ರಿಂದ 5-30ರವರೆಗೆ 2ನೆಯ ತರಗತಿಯಿಂದ 12ನೆಯ ತರಗತಿಯವರೆಗೆ ಭಾಗವಹಿಸುವ ಮಕ್ಕಳು ಕದ್ರಿ ಪಾರ್ಕಿನಲ್ಲಿ ಒಂದು ಗಂಟೆ ಮುಂಚಿತವಾಗಿ ಹೆಸರು ಕೊಡಬೇಕು.

