ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮಾಹೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಇದರ ಆಶ್ರಯದಲ್ಲಿ ಬಾರಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಉಡುಪಿ ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 14 ಡಿಸೆಂಬರ್ 2024ರ ಶನಿವಾರದಂದು ಬೆಳಿಗ್ಗೆ ಗಂಟೆ 9-00 ಗಂಟೆಯಿಂದ ಉಡುಪಿಯ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಂಗಣದಲ್ಲಿ ನಡೆಸಲಾಗುವುದು.
ಆಸಕ್ತರು ಶಾಲಾ ಗುರುತುಚೀಟಿಯೊಂದಿಗೆ ಬೆಳಿಗ್ಗೆ 9-00 ಗಂಟೆಗೆ ಸ್ಪರ್ಧೆಯಲ್ಲಿ ಭಾಗವಹಿಸುವುದು. ಪ್ರವೇಶ ಶುಲ್ಕವಿಲ್ಲ, ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ.
ಸ್ಪರ್ಧಾ ವಿಷಯ : 1ರಿಂದ 4ನೇ ತರಗತಿ : ಐಚ್ಛಿಕ
5ರಿಂದ 7ನೇ ತರಗತಿ : ಐಚ್ಛಿಕ
8ರಿಂದ 10ನೇ ತರಗತಿ : ಮಕ್ಕಳ ದಿನಾಚರಣೆ ಅಥವಾ ಸಂತೆ
ಪಿ.ಯು.ಸಿ. ವಿದ್ಯಾರ್ಥಿಗಳಿಗೆ : ಕನ್ನಡ ಜ್ಞಾನಪೀಠ ಪುರಸ್ಕೃತರು ಅಥವಾ ಪರಿಸರ ಸಂರಕ್ಷಣೆ
ಪದವಿ ವಿದ್ಯಾರ್ಥಿಗಳಿಗೆ : ಪ್ಲಾಸ್ಟಿಕ್ ಪೊಲ್ಯೂಷನ್ ಅಥವಾ ಇಂಡಿಯನ್ ಹೆರಿಟೇಜ್
ಸ್ಪರ್ಧಾಳುಗಳು ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಡುವುದು
* ಸ್ಪರ್ಧಾ ಸಮಯ – ಬೆಳಿಗ್ಗೆ 9-00ರಿಂದ 11-00
* ಚಿತ್ರ ಬಿಡಿಸಲು ಹಾಳೆಯನ್ನು ಸಂಘಟಕರೆ ಒದಗಿಸುತ್ತಾರೆ.
* ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.
* ಪ್ರತೀ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು.
* ಬಹುಮಾನ ನಗದು ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ.
* ಸ್ಪರ್ಧೆಯ ಫಲಿತಾಂಶವನ್ನು ಸ್ಥಳದಲ್ಲಿ ತಿಳಿಸಲಾಗುವುದು ಮತ್ತು ಅಂದೇ ಬಹುಮಾನ ನೀಡಲಾಗುವುದು.
* ಎಲ್ಲಾ ವಿಭಾಗದಲ್ಲೂ ಕನಿಷ್ಠ 5 ಜನ ವಿದ್ಯಾರ್ಥಿಗಳು ಇದ್ದರೆ ಮಾತ್ರ ಸ್ಪರ್ಧೆ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9448868868