ಬೆಂಗಳೂರು : ದೃಶ್ಯ ರಂಗತಂಡ ಇದರ ವತಿಯಿಂದ ‘ದೃಶ್ಯ ನಾಟಕೋತ್ಸವ 2025’ವನ್ನು ದಿನಾಂಕ 09 ಮಾರ್ಚ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ನೋಂದಣಿದಳ ಮಹಾಪರಿವೀಕ್ಷಕರಾದ ಕೆ.ಎ. ದಯಾನಂದ್, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜ್ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ರಂಗಕರ್ಮಿ ಗಣೇಶ ಶೆಣೈ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಹಿರಿಯ ರಂಗಕರ್ಮಿ ಲೇಖಕರಾದ ಡಾ. ವಿಜಯಾ, ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ ಮತ್ತು ರಂಗ ನಿರ್ದೇಶಕರಾದ ಸುರೇಶ್ ಅನಗಳ್ಳಿ ಇವರಿಗೆ ರಂಗ ಗೌರವ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕಿರು ಚಿತ್ರ ಪ್ರದರ್ಶನ ಹಾಗೂ ದಾಕ್ಷಾಯಿಣಿ ಭಟ್ ಎ. ಇವರ ನಿರ್ದೇಶನದಲ್ಲಿ ‘ತಾಜ್ ಮಹಲಿನ ಟೆಂಡರ್’ ನಾಟಕ ಪ್ರದರ್ಶನ ನಡೆಯಲಿದೆ.