ಬೆಳಗಾವಿ : ಈ ಹೊತ್ತಿಗೆ ಟ್ರಸ್ಟ್ ಇದರ ‘ದಶಮಾನೋತ್ಸವ ಸಂಭ್ರಮ’ದ ಪ್ರಯುಕ್ತ ‘ನಾಟಕ ರಚನಾ ಕಮ್ಮಟ’ವನ್ನು 2024ರ ಜನವರಿ 26,27 ಮತ್ತು 28ರವರೆಗೆ ಬೆಳಗಾವಿಯ ‘ನಮ್ಮವರೊಂದಿಗೆ’ ಬಳಗದ ಸಹಯೋಗದೊಂದಿಗೆ ನಡೆಸುತ್ತಿದೆ. ನಾಟಕ ರಚನೆಯಲ್ಲಿ ಉತ್ಸುಕರಾಗಿರುವವರಿಗೆ ಇದೊಂದು ಸುವರ್ಣಾವಕಾಶ. ಕನ್ನಡ ಸಾಹಿತ್ಯಲೋಕದ ಮಹತ್ವದ ವಿಮರ್ಶಕರಾದ ಡಾ. ಎಂ.ಎಸ್. ಆಶಾದೇವಿ ಕಮ್ಮಟದ ನಿರ್ದೇಶಕರು.
ನಾಟಕವು ಅತ್ಯಂತ ಪ್ರಭಾವಶಾಲಿ ಸಾಹಿತ್ಯ ಪ್ರಕಾರ. ಸಮುದಾಯದ ಆಗುಹೋಗುಗಳಷ್ಟೇ ಅದರ ಚಲನೆಗಳನ್ನು ಮುನ್ನೋಟದಲ್ಲಿ ಕೊಡಬಲ್ಲ ಶಕ್ತಿಯೂ ಇದಕ್ಕಿದೆ. ಸಾಹಿತ್ಯ ಪ್ರಕಾರವಲ್ಲದೆ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಹೋರಾಟಗಳ ಮಾಧ್ಯಮವಾಗಿಯೂ ನಾಟಕ ತನ್ನ ಬಹು ಪಾತ್ರಗಳನ್ನು ನಿಭಾಯಿಸುತ್ತಾ ಬಂದಿದೆ. ಆದ್ದರಿಂದಲೇ ಸಾಹಿತ್ಯ ಚರಿತ್ರೆಯಲ್ಲಿ ನಾಟಕಕ್ಕೆ ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ನಾಟಕ ರಚನೆಯ ತಾತ್ವಿಕ ತಾಂತ್ರಿಕ ಹಾಗೂ ಸೌಂದರ್ಯಾತ್ಮಕ ನೆಲೆಗಳನ್ನು ಪರಿಚಯಿಸುವ ಮತ್ತು ಕನ್ನಡದ ಸಮೃದ್ಧ ನಾಟಕ ಪರಂಪರೆಯನ್ನು ಅರಿಯುವ ಶಿಬಿರವನ್ನು ಈ ಹೊತ್ತಿಗೆಯಿಂದ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ. ನಾಟಕ ರಚನೆಯ ಕುರಿತ ಸಂವಾದಗಳು ಹಾಗೂ ಕಮ್ಮಟದ ಮೊದಲ ಮತ್ತು ಎರಡನೇ ದಿನ ಕಮ್ಮಟದ ಭಾಗವಾಗಿ ಎರಡು ನಾಟಕಗಳ ಪ್ರದರ್ಶನಗಳೂ ಇವೆ.
ಡಾ. ಕೆ.ವೈ. ನಾರಾಯಣಸ್ವಾಮಿ, ಡಾ. ಶ್ರೀಪಾದ ಭಟ್, ಡಾ.ಹೇಮಾ ಪಟ್ಟಣಶೆಟ್ಟಿ, ಡಾ. ರಾಮಕೃಷ್ಣ ಮರಾಠೆ, ಡಾ. ಪ್ರಕಾಶ ಗರುಡ, ರಜನಿ ಗರುಡ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಈ ಮೂರು ದಿನಗಳ ಈ ಕಮ್ಮಟದಲ್ಲಿ ಭಾಗವಹಿಸಲು ಬಯಸುವವರು ನಿಮ್ಮ ಪರಿಚಯ, ಸಂಪರ್ಕ ಸಂಖ್ಯೆ, ಭಾವಚಿತ್ರವನ್ನು [email protected] ಈ ಮಿಂಚಂಚೆಗೆ ಕಳುಹಿಸಿಕೊಡಿ.
ಕಮ್ಮಟದ ಪ್ರವೇಶ ಶುಲ್ಕ ರೂ.2,000/-
ಪ್ರವೇಶ ಶುಲ್ಕವನ್ನು ಮರಳಿಸಲಾಗುವುದಿಲ್ಲ.
ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.
ಮೂವತ್ತು ಜನರಿಗೆ ಮಾತ್ರ ಅವಕಾಶ.
ಅರ್ಜಿ ತಲುಪಲು ಕೊನೆಯ ದಿನಾಂಕ 07-01-2024