ಬೆಂಗಳೂರು : ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕೊಡಮಾಡುವ 2024ರ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ ಎಂಟು ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಕಥಾ ವಿಭಾಗದಲ್ಲಿ ರವಿಕುಮಾರ್ ನೀಹ ಅವರ ‘ಅವು ಅಂಗೇ’, ಮಹಾಂತೇಶ್ ನವಲ್‌ಕರ್ ಅವರ ‘ಬುದ್ದ ಗಂಟೆಯ ಸದ್ದು’, ಕವನ ವಿಭಾಗದಲ್ಲಿ ಗೀತಾ ಮಂಜು ಬೆಣ್ಣೆಹಳ್ಳಿ ಅವರ ‘ಕಿರು ಬೆಳಕಿನ ಸೂಜಿ’, ಶಶಿ ತರೀಕೆರೆ ಅವರ ‘ಪ್ಯೂಷಾ’, ಪ್ರಬಂಧ ವಿಭಾಗದಲ್ಲಿ ಡಾ. ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ಕಥೆ’, ಡಾ. ಕರವೀರ ಪ್ರಭು ಕ್ಯಾಲಕೊಂಡ ಅವರ ‘ನೀವೂ ನೆಪೋಲಿಯನ್ ಆಗಿ’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, ಡಾ. ಸಿ. ಸೋಮಶೇಖರ್ /ಸರ್ವಮಂಗಳಾ ದತ್ತಿ ಪ್ರಶಸ್ತಿಗೆ ಪ್ರೊ. ಧರಣೇಂದ್ರ ಕುರಕರಿ ಅವರ ‘ಜಾತ್ರಿ’ ಕಾದಂಬರಿ ಮತ್ತು ಮಹಾಂತೇಶ ಪಾಟೀಲರ ‘ಬೆಳಕು ಬೆಳೆಯುವ ಹೊತ್ತು’ ವಿಮರ್ಶೆ ಆಯ್ಕೆಯಾಗಿವೆ.