ಮೈಸೂರು : ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ ನವದೆಹಲಿ ಇವರು ಜೆ.ಎಸ್.ಎಸ್.ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ನಡೆಸಿದ ದಕ್ಷಿಣ ವಲಯ ಅಂತರ್ ವಿ.ವಿ. ಯುವಜನೋತ್ಸವದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ, ಯುವ ಸಾಹಿತಿ ಶಶಿರಾಜ್ ರಾವ್ ಕಾವೂರು ರಚಿಸಿ ಖ್ಯಾತ ರಂಗ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ನಿರ್ದೇಶನದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ‘ಏಕಾದಶಾನನ’ ನಾಟಕವು ಪ್ರಥಮ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಅದಕ್ಕೂ ಮೊದಲು ಮಂಗಳೂರು ವಿ.ವಿ. ಅಂತರ್ ಕಾಲೇಜು ರಂಗಭೂಮಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಏಕಾದಶಾನನ ಪ್ರಥಮ ಪ್ರಶಸ್ತಿ ಪಡೆದು ದಕ್ಷಿಣ ವಲಯಕ್ಕೆ ಆಯ್ಕೆಯಾಗಿತ್ತು.

ಜೀವನ್ ರಾಂ ಸುಳ್ಯ ಆಳ್ವಾಸ್ ಗೆ ನಿರ್ದೇಶಿಸಿದ ಊರುಭಂಗ, ಮಧ್ಯಮ ವ್ಯಾಯೋಗ, ಏಕಾದಶಾನನ, ಬರ್ಬರೀಕ, ದೂತವಾಕ್ಯ ಮುಂತಾದ ನಾಟಕಗಳೊಂದಿಗೆ ದೇಶದ ನಾನಾ ಭಾಗಗಳಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ 14 ಬಾರಿ ಭಾಗವಹಿಸಿದ್ದರು.
ಮಂಗಳೂರು ವಿ.ವಿ., ರಾಜೀವ ಗಾಂಧಿ ವಿ.ವಿ.ಯನ್ನು ಪ್ರತಿನಿಧಿಸಿದ ಇವರ ನಿರ್ದೇಶನದ ನಾಟಕಗಳು ಈಗಾಗಲೇ 11 ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿಯನ್ನು ಪಡೆದಿರುವುದು ಒಂದು ದಾಖಲೆಯಾಗಿದೆ.

ಜೀವನ್ ರಾಂ ಸುಳ್ಯ