ಪುತ್ತೂರು : ದ.ಕ ಜಿಲ್ಲಾ ಕ.ಸಾ.ಪ ಪುತ್ತೂರು ತಾಲೂಕು ಘಟಕ ಮತ್ತು ಉಪ್ಪಿನಂಗಡಿ ಹೋಬಳಿ ಘಟಕದ ನೇತೃತ್ವದಲ್ಲಿ ಹಾಗೂ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಸಂಚಾಲಕತ್ವದಲ್ಲಿ ಆಯೋಜಿಸುವ ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯು ದಿನಾಂಕ 01-10-2023ರ ಆದಿತ್ಯವಾರದಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಈ ಎರಡೂ ಸ್ಪರ್ಧೆಯು ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಗುವುದು.
ನಿಯಮಗಳು :
ಮೂರು ನಿಮಿಷದ ಕಾಲಾವಕಾಶ, ಸ್ಪರ್ಧೆಯ ವಿಷಯ ಗಾಂಧಿ ಜಯಂತಿ/ಸ್ವಾತಂತ್ರ್ಯ/ ದೇಶಭಕ್ತಿ ಯಾವುದೇ ವಿಷಯವನ್ನು ಆಯ್ಕೆ ಮಾಡಬಹುದು, ದೇಶಭಕ್ತಿ ಗೀತೆಗೆ ಕರೋಕೆ ಬಳಸಲು ಅವಕಾಶವಿಲ್ಲ, ಸಮೂಹ ಗೀತೆಗೆ ಅವಕಾಶವಿಲ್ಲ, ಜಾತಿ, ಮತ, ಧರ್ಮ ನಿಂದನೆಗೆ ಹಾಗೂ ರಾಜಕೀಯ ವಿಷಯಗಳಿಗೆ ಅವಕಾಶ ಇಲ್ಲ. ಪುತ್ತೂರು ತಾಲೂಕಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಹಾಗೂ ಪುತ್ತೂರು ತಾಲೂಕಿನ ನಿವಾಸಿಗಳು, ಉದ್ಯೋಗಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನೊಂದಣಿ ಮಾಡಲು ಕೊನೆಯ ದಿನಾಂಕ 25-09-2023. ಆಸಕ್ತರು ಕಾರ್ಯಕ್ರಮದ ಸಂಯೋಜರಕರಾದ ನವೀನ್ ಬ್ರ್ಯಾಗ್ಸ್ ಅವರ ದೂರವಾಣಿ ಸಂಖ್ಯೆ 9591168205 ಅಥವಾ ಕ.ಸಾ.ಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ 9844401295 ಗೆ ತಮ್ಮ ಹೆಸರು, ಸ್ಪರ್ಧಾ ವಿಭಾಗ, ಸ್ಪರ್ಧೆಯ ವಿಷಯ, ತಮ್ಮ ದೂರವಾಣಿ ಸಂಖ್ಯೆಗಳನ್ನು ವಾಟ್ಸಪ್ ಮಾಡಬೇಕಾಗಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕ.ಸಾ.ಪ ಪುತ್ತೂರು ಹಾಗೂ ರೋಟರಿಕ್ಲಬ್ ಉಪ್ಪಿನಂಗಡಿ ವತಿಯಿಂದ ಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ | ಒಕ್ಟೋಬರ್ 1ರಂದು
No Comments1 Min Read
Previous Articleದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಯುವ ಕವಿ ಹಾಗೂ ಕತೆಗಾರರಿಗೆ ವಿಶೇಷ ಆಹ್ವಾನ | ಕೊನೆಯ ದಿನಾಂಕ ಒಕ್ಟೋಬರ್ 30
Next Article ಪರಿಚಯ ಲೇಖನ | ಗಗನ್ ರಾಮ್ – ಪ್ರತಿಭಾವಂತ ರಂಗ ವಿದ್ಯಾರ್ಥಿ