ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಹಾಗೂ ಜೇನುಗೂಡು ಕಲಾ ಬಳಗ ಕೆಂಗೇರಿ ಇದರ ವತಿಯಿಂದ ಸಾಹಿತಿ ಶ್ರೀ ರಾಂ.ಕೆ. ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ, ಯುವ ಸಾಹಿತಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಇವರ ಪುಸ್ತಕ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 06 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂ ಎರಡನೇ ಮಹಡಿಯಲ್ಲಿರುವ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಖ್ಯಾತ ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಇವರು ಯುವ ಸಾಹಿತಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಇವರ ‘ದ ಕಂಪ್ಯಾರಿಟಿವ್ ಸ್ಟಡಿ ಆಫ್ ಡ್ರಮಾಟಿಕ್ ಥಿಯರೀಸ್ ಇನ್ ಟಿ.ಎಸ್. ಎಲಿಯಟ್ಸ್ ಪ್ಲೇಸ್’ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ಣಾಟಕ ಗಾಂಧಿ ಸ್ಮಾರಕ ನಿಧಿ ಇವರ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು 2023-24ರ ಸಾಲಿನ ಸಾಹಿತಿ ಶ್ರೀ ರಾಂ.ಕೆ. ಹನುಮಂತಯ್ಯ ದತ್ತಿ ಪುಸ್ತಕ ಪ್ರಶಸ್ತಿಯನ್ನು ಶ್ರೀಮತಿ ಹಾ.ವೀ. ಮಂಜುಳಾ ಶಿವಾನಂದ, ಹೊಸಹಳ್ಳಿ ಇಂ. ಶ್ರೀ ದಾಳೇಗೌಡ, ಶ್ರೀ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಮತ್ತು ಶ್ರೀಮತಿ ಜ್ಯೋತಿ ಎನ್. ಲಿಂಗಪಲ್ಲಿ ಇವರುಗಳಿಗೆ ಪ್ರದಾನ ಮಾಡಲಿದ್ದು, ಸಾಹಿತಿ ರಾಂ.ಕೆ. ಹನುಮಂತಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಮರ್ಶಕಿ ಡಾ. ಭಾಗ್ಯಲಕ್ಷ್ಮೀ ವಿ. ಇವರು ಪುಸ್ತಕದ ಕುರಿತು ಮಾತನಾಡಲಿದ್ದು, ಸಾಹಿತಿ ಡಾ. ಎಸ್. ರಾಮಲಿಂಗೇಶ್ವರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕವಿಗೋಷ್ಠಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸೇವಾ ಗೌರವ ಪ್ರಶಸ್ತಿ ಪ್ರದಾನ ಹಾಗೂ ಶ್ರೀಮತಿ ಅಂಬುಜಾಕ್ಷಿ ಬೀರೇಶ್ ಮತ್ತು ಕರೋಕೆ ಶ್ರೀ ಸುಬ್ಬಣ್ಣ ಇವರಿಂದ ಗೀತ ಗಾಯನ ಪ್ರಸ್ತುತಗೊಳ್ಳಲಿದೆ.