ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ) ಧಾರವಾಡ ಮತ್ತು ಅಭಿನಯ ಭಾರತಿ (ರಿ.) ಧಾರವಾಡ ಇವರ ವತಿಯಿಂದ ಮನೋಹರ ಗ್ರಂಥಮಾಲಾ ಮತ್ತು ಕುತ೯ಕೋಟಿ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಗಳ ಸಹಕಾರದೊಂದಿಗೆ ದಿನಾಂಕ 26 ಜುಲೈ 2025ರಂದು ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ ಬೆಳಿಗ್ಗೆ 11-30 ಗಂಟೆಗೆ ಜಿ.ಬಿ. ಜೋಶಿ ಮತ್ತು ಕೀರ್ತಿನಾಥ ಕುರ್ತಕೋಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಕಲ್ಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಡಾ. ಬಸವರಾಜ ಡೋಣೂರ ಅವರು ‘ಜಿ.ಬಿ. ಜೋಶಿಯವರ ಕಾದಂಬರಿ ‘ಧರ್ಮಸೆರೆ’ ಇದರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮವು ಶ್ರೀ ಜಯತೀರ್ಥ ಜಹಗೀರದಾರ ಇವರ ದತ್ತಿ ಕೊಡುಗೆಯಾಗಿದ್ದು ಧಾರವಾಡದ ಸಾಹಿತ್ಯ ಸಂಸ್ಕೃತಿ ಪ್ರಿಯರು ಈ ಸಾಹಿತ್ಯದ ರಸದೂಟವನ್ನು ಸವಿಯಬೇಕೆಂದು ಅಭಿನಯ ಭಾರತಿ ಸಂಚಾಲಕರು ವಿನಂತಿಸುತ್ತಾರೆ.