ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಇವರ ವತಿಯಿಂದ ‘ದತ್ತಿನಿಧಿ ಕಾರ್ಯಕ್ರಮ’ವನ್ನು ದಿನಾಂಕ 13, 14 ಮತ್ತು 16 ಮಾರ್ಚ್ 2025ರಂದು ಹಮ್ಮಿಕೊಳ್ಳಲಾಗಿದೆ.
ದಿನಾಂಕ 13 ಮಾರ್ಚ್ 2025ರಂದು ಬೆಳಿಗ್ಗೆ 11-00 ಗಂಟೆಗೆ ವಿಶ್ವವಿದ್ಯಾನಿಲಯ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಜ್ಞಾನಸಹ್ಯಾದ್ರಿ ಶಂಕರಘಟ್ಟ ಇವರ ಸಂಯುಕ್ತಾಶ್ರಯದಲ್ಲಿ ಜ್ಞಾನಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಡೆಯಲಿರುವ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಧರ್ಮೆಗೌಡ ಹೆಚ್.ಎಂ. ಇವರು ವಹಿಸಲಿರುವರು. ‘ಕುವೆಂಪು ಸಾಹಿತ್ಯ ವಿದ್ಯಾರ್ಥಿ ಪ್ರಜ್ಞೆ’ ಮತ್ತು ‘ವಚನ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ’ ಎಂಬ ವಿಷಯದ ಬಗ್ಗೆ ಸಾಹಿತಿ ಡಾ. ಹೆಚ್.ಟಿ. ಕೃಷ್ಣಮೂರ್ತಿ ಮತ್ತು ಕನ್ನಡ ಶಿಕ್ಷಕರಾದ ಡಾ. ಭಾಗ್ಯಲಕ್ಷ್ಮಿ ಬಿ.ಎಸ್. ಇವರು ಉಪನ್ಯಾಸ ನೀಡಲಿದ್ದಾರೆ.
ದಿನಾಂಕ 14 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಶಿವಮೊಗ್ಗ ವಿದ್ಯಾನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಭಾಂಗಣದಲ್ಲಿ ನಡೆಯಲಿರುವ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲರಾದ ಡಾ. ಟಿ. ಅವಿನಾಶ್ ಇವರು ವಹಿಸಲಿರುವರು. ‘ಸೇವಾ ಸಂಸ್ಕೃತಿ – ಯುವಜನತೆ’ ಎಂಬ ವಿಷಯದ ಬಗ್ಗೆ ತಾಯಿಮನೆ ಸುದರ್ಶನ್ ಹಾಗೂ ‘ಕನ್ನಡದಲ್ಲಿ ಹವ್ಯಕ ಭಾಷಾ ವೈಶಿಷ್ಟ್ಯ’ ಎಂಬ ವಿಷಯದ ಬಗ್ಗೆ ಡಾ. ಕೃಷ್ಣಾ ಎಸ್. ಭಟ್ ಇವರು ಉಪನ್ಯಾಸ ನೀಡಲಿದ್ದಾರೆ.
ದಿನಾಂಕ 16 ಮಾರ್ಚ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಶಿವಮೊಗ್ಗ ಕೃಷಿನಗರ 2ನೇ ಮುಖ್ಯ ರಸ್ತೆ 7 ಮತ್ತು 8ನೇ ಕ್ರಾಸ್, ಶ್ರೀ ಗಾಯತ್ರಿ ವಿಶ್ವಕರ್ಮ ದೇವಾಲಯ ಭವನ ಪಕ್ಕ ನಡೆಯಲಿರುವ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಅನ್ನಪೂರ್ಣಮ್ಮ ಕಾಳಾಚಾರ್ ಇವರು ವಹಿಸಲಿರುವರು. ವಿಶ್ವಕರ್ಮರ ಪಂಚ ಕಸುಬುಗಳು ಮತ್ತು ಕೊಡುಗೆಗಳು ಎಂಬ ವಿಷಯದ ಬಗ್ಗೆ ಹಿರಿಯ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಇವರು ಉಪನ್ಯಾಸ ನೀಡಲಿದ್ದಾರೆ. ‘ಸಂತ ಶಿಶುನಾಳ ಷರೀಫರ ಗೀತೆ’ಗಳನ್ನು ಶ್ರೀಮತಿ ಲಲಿತಮ್ಮ ವಿಠ್ಠಲದಾಸ್ ಇವರು ಹಾಡಲಿದ್ದಾರೆ.