ಬೆಳಗಾವಿ : ಶ್ರೀ ಮಹಾರಾಜ ಸಿದ್ದು ಹಳ್ಳೂರ ಇವರ ‘ಎಷ್ಟ ಚಂದಿತ್ತ ಆವಾಗ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 22 ಜೂನ್ 2025 ರಂದು ಮುಂಜಾನೆ 10-00 ಗಂಟೆಗೆ ಮೂಡಲಗಿ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಲಕ್ಷ್ಮಣ ಯ. ಅಡಿಹುಡಿ ಇವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರಾದ ಬಾಲಚಂದ್ರಣ್ಣಾ ಲ. ಜಾರಕಿಹೊಳಿ ಇವರು ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಜಾನಪದ ಗಾಯಕರಾದ ಗುರುರಾಜ ಹೊಸಕೋಟಿ ಇವರು ಕೃತಿ ಲೋಕಾರ್ಪಣೆಗೊಳಿಸಲಿದ್ದು, ಸಾಹಿತಿ ದುರ್ಗಪ್ಪ ದಾಸನ್ನವರ ಇವರು ಕೃತಿ ಪರಿಚಯ ಮಾಡಲಿರುವರು.