ಕೊಪ್ಪಳ : ಮೇ ಸಾಹಿತ್ಯ ಮೇಳ ಈ ವರ್ಷ ದಿನಾಂಕ 25-05-2024 ಮತ್ತು 26-05-2024ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಮುಕ್ತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, 35 ವರ್ಷದೊಳಗಿನವರು ಭಾಗವಹಿಸಬಹುದು.
1) ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ.
2) ಸಂವಿಧಾನ ರೂಪಿಸಿದ ಭಾರತದ ಪ್ರಜಾಪ್ರಭುತ್ವದ ಸ್ವರೂಪ ಮತ್ತು ವಾಸ್ತವ ಸ್ಥಿತಿ
3) ಸಂವಿಧಾನ ಪೀಠಿಕೆಯ ಆದರ್ಶಗಳ ವಾಸ್ತವ ಅವಲೋಕನ
ಈ ಮೂರು ವಿಷಯಗಳ ಕುರಿತು 500 ಶಬ್ದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕಿದೆ. ವಾಟ್ಸಪ್ ಇಲ್ಲವೇ ಇ-ಮೇಲ್ [email protected], [email protected], [email protected], [email protected] ಮೂಲಕ ದಿನಾಂಕ 15-05-2024ರೊಳಗೆ ತಲುಪುವಂತೆ ಕಳಿಸಬೇಕು. ಆಯ್ಕೆಯಾದ ಪ್ರಬಂಧಗಳಿಗೆ ನಗದು ಬಹುಮಾನವಿರುತ್ತದೆ. ದಿನಾಂಕ 25-05-2024ರಂದು ನಡೆಯುವ ಕಾರ್ಯಕ್ರಮಮದಲ್ಲಿ ಬಹುಮಾನ ವಿತರಿಸಲಾಗುವುದು. ಪ್ರಥಮ ಬಹುಮಾನ ರೂ.2,500/- ದ್ವಿತೀಯ ಬಹುಮಾನ ರೂ.2,000/-, ತೃತೀಯ ಬಹುಮಾನ ರೂ.1,500/- ಹಾಗೂ ಭಾಗವಹಿಸಿದವರಿಗೆಲ್ಲರಿಗೂ ಸರ್ಟಿಫಿಕೇಟ್ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶರಣಪ್ಪ ಬಾಚಲಾಪುರ್ 94480 25074, ಸಿರಾಜ್ ಬಿಸರಳ್ಳಿ 98802 57488, ನಾಗರಾಜ್ ಡೊಳ್ಳಿನ 99011 35874, ಲಕ್ಷ್ಮಣ ಪೀರಗಾರ 96639 74163 ಇವರನ್ನು ಸಂಪರ್ಕಿಸಬಹುದು.