ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಆರ್ಟ್ ಕೆನರಾ ಟ್ರಸ್ಟ್ ಪ್ರಸ್ತುತ ಪಡಿಸುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ವೀಣಾ ಶ್ರೀನಿವಾಸ್, ಸೈಯದ್ ಆಶಿಫ್ ಆಲಿ ಮತ್ತು ರಾಜೇಂದ್ರ ಕೇದಿಗೆ ಇವರ ಚಿತ್ರಕಲೆ ಮತ್ತು ರೇಖಾಚಿತ್ರಗಳ ಪ್ರದರ್ಶನವನ್ನು ದಿನಾಂಕ 04 ಮೇ 2025ರಿಂದ 14 ಮೇ 2025ರವರೆಗೆ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 04 ಮೇ 2025ರಂದು ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕರಾದ ಮಧುಸೂದನ್ ಕುಮಾರ್ ಇವರ ಸಮ್ಮುಖದಲ್ಲಿ ಈ ಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು, ದಿನಾಂಕ 05 ಮೇ 2025ರಿಂದ 14 ಮೇ 2025ರವರೆಗೆ ಪ್ರತಿದಿನ 11-00 ಗಂಟೆಯಿಂದ 7-00 ಗಂಟೆಗೆ ತನಕ ಪ್ರದರ್ಶನ ನಡೆಯಲಿದೆ.