ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಪ್ಸ್ ಕಾಲೇಜು ಮಂಗಳೂರು ಇದರ ಸಹಕಾರದೊಂದಿಗೆ ಖ್ಯಾತ ವಚನ ಸಾಹಿತಿ, ಕವಿ ಸಂಶೋಧಕ ಫ. ಗು. ಹಳಕಟ್ಟಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮವು ದಿನಾಂಕ 11 ಜುಲೈ 2025ರ ಬುಧವಾರ ಮ್ಯಾಪ್ಸ್ ಪಿ.ಯು. ಕಾಲೇಜಿನಲ್ಲಿ ನಡೆಯಿತು.
ಸಂಸ್ಥೆಯ ಉಪಪ್ರಾಂಶುಪಾಲ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ “ಫ. ಗು. ಹಳಕಟ್ಟಿಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದವರು” ಎಂದರು. ಅಧ್ಯಕ್ಷತೆ ವಹಿಸಿದ್ದ ಮ್ಯಾಪ್ಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಕುಮಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ ಪದುವಾ ಕಾಲೇಜಿನ ಸಹಾಯಕಿ ಪ್ರಾಧ್ಯಾಪಿಕೆ ಅಕ್ಷಯಾ ಶೆಟ್ಟಿ ಮಾತನಾಡಿ “ಫ. ಗು. ಹಳಕಟ್ಟಿಯವರು ಓರ್ವ ಶ್ರೇಷ್ಠ ವಚನ ಸಾಹಿತಿ, ಕವಿಗಳಾಗಿದ್ದು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುತ್ತಾರೆ. ಅವರ ಬದುಕು ಹಾಗೂ ಸಾಧನೆಗಳು ಇಂದಿನವರೆಗೆ ಮಾದರಿ” ಎಂದರು.
ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿ, ವಿದ್ಯಾರ್ಥಿನಿ ತವಿಷ್ಕಾ ನಿರ್ವಹಿಸಿದರು.

