Subscribe to Updates

    Get the latest creative news from FooBar about art, design and business.

    What's Hot

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತರಂಗಾಂತರಂಗದೊಳಗೆ ಸೇರಿಹೋದ ಡಾ.ಕಮಲಾ ಹೆಮ್ಮಿಗೆ 
    Literature

    ತರಂಗಾಂತರಂಗದೊಳಗೆ ಸೇರಿಹೋದ ಡಾ.ಕಮಲಾ ಹೆಮ್ಮಿಗೆ 

    September 25, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಖ್ಯಾತ ಲೇಖಕಿ ಡಾ.ಕಮಲಾ ಹೆಮ್ಮಿಗೆ ದಿನಾಂಕ 24-09-2023ರ ಭಾನುವಾರದಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ದಿನಾಂಕ 20-11-1952ರಂದು ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ ಜನಿಸಿದ ಕಮಲಾ ಹೆಮ್ಮಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು  ಎಂ.ಎ.ಪದವಿ ಪಡೆದರು. ‘ಸವದತ್ತಿ ಎಲ್ಲಮ್ಮ’ ಹಾಗೂ ‘ದೇವದಾಸಿ ಪದ್ದತಿ’ಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ.ಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾವನ್ನು ಪಡೆದರು. ಕಮಲ ಹೆಮ್ಮಿಗೆ ಅವರು ಆಕಾಶವಾಣಿಯ ಧಾರವಾಡ ಮತ್ತು ಮಂಗಳೂರು ಕೇಂದ್ರಗಳಲ್ಲಿ ಹಾಗೂ ದೂರದರ್ಶನದ ಬೆಂಗಳೂರು ಮತ್ತು ತಿರುವನಂತಪುರದ ಕೇಂದ್ರಗಳಲ್ಲಿ ವೃತ್ತಿಯಲ್ಲಿದ್ದರು.

    ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ರೂಪಗಳಲ್ಲಿ ಬರಹಗಳನ್ನು ನೀಡುತ್ತಾ ಬಂದಿದ್ದರು. ಅವರ ಬರಹಗಳಲ್ಲಿ ‘ಪಲ್ಲವಿ’, ‘ವಿಷಕನ್ಯೆ’, ‘ಮುಂಜಾನೆ ಬಂದವನು’, ‘ನೀನೆ ನನ್ನ ಆಕಾಶ’, ‘ಮರ್ಮರ’ ಮತ್ತು  ‘ಕರುಳ ಸಂವಾದ’ ಮುಂತಾದ ಕಾವ್ಯಗಳಿವೆ. ‘ಬದುಕೆಂಬ ದಿವ್ಯ’, ‘ಆಖ್ಯಾನ’, ‘ಕಿಚ್ಚಿಲ್ಲದ ಬೇಗೆ’ ಮುಂತಾದ ಕಾದಂಬರಿಗಳಿವೆ. ‘ಮಾಘ ಮಾಸದ ದಿನ’, ‘ಬಿಸಿಲು ಮತ್ತು ಬೇವಿನ ಮರ’, ‘ನಾನು ಅವನು ಮತ್ತು ಅವಳು’, ‘ಹನ್ನೊಂದು ಕಥೆಗಳು’, ‘ತ್ರಿಭಂಗಿ’ ಮುಂತಾದ ಕಥಾ ಸಂಕಲನಗಳಿವೆ. ‘ಲಾವಣಿ-ಒಂದು ಹಕ್ಕಿ ನೋಟ’, ‘ಸವದತ್ತಿ ಎಲ್ಲಮ್ಮನ ಜಾತ್ರೆ’, ‘ಪಂಚಮುಖ’, ‘ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ಧತಿ ಒಂದು ಅಧ್ಯಯನ’ ಮುಂತಾದ ಸಂಶೋಧನಾ ಕೃತಿಗಳಿವೆ. ಜ್ಞಾನಪೀಠ ಪುರಸ್ಕೃತ ಸೀತಾಕಾಂತ ಮಹಾಪಾತ್ರರ ಕಾವ್ಯಾನುವಾದ ‘ಶಬ್ದಗರ್ಭಿತ ಆಕಾಶ’ , ಶಶಿ ದೇಶಪಾಂಡೆಯವರ ‘ಡಾರ್ಕ್ ಹೋಲ್ಡ್ಸ್ ನೋ ಟೆರರ್’ ಕಾದಂಬರಿಯ ಅನುವಾದ ‘ಕತ್ತಲಲ್ಲಿ ಭಯವಿಲ್ಲ’,  ಮಲಯಾಳೀ ಲೇಖಕಿಯರ ಸಣ್ಣ ಕಥೆಗಳ ಅನುವಾದ ಸಂಕಲನ ‘ಮಾಯಾ ಕನ್ನಡಿ’, ಮಲಯಾಳದ ಲೇಖಕಿಯರ ಕಥೆಗಳ ಸಂಕಲನ  ‘ಪೆಣ್’ , ಗ್ರೇಸಿ ಅವರ ಮಲಯಾಳದ ಕಥೆಗಳ ಅನುವಾದ ‘ಮೆಟ್ಟಿಲಿಳಿದು ಹೋದ‍ ಪಾರ್ವತಿ’ , ಮಲಯಾಳಂ ಕತೆಗಳ ಸಂಕಲನ ‘ಕೇರಳದ ಕಾಂತಾಸಮ್ಮಿತ’, ಮಲಯಾಳದ ‘ರಾಜಲಕ್ಷ್ಮೀಯವರ ಕಥೆಗಳು’ ಮುಂತಾದವು ಇವೆ. ‘ಹನಿ ಹನಿ’, ‘ಹಾಡಿನ ಹಗೇವ’, ‘ಬಣ್ಣದ ಭರಣಿ’, ‘ದೇವರಿಗೆ ಶರಣೆನ್ನುವೆನೇ’, ‘ಮಂಗಳದ ಮಾಪೂರ’, ‘ಹೂವು ಬಿದ್ದಾವ ನೆಲಕ’, ‘ಪೊಳ್ಳಿನೊಳಗೆ ಪಕ್ಷಿ’, ‘ವೀರಭದ್ರ ದೇವರ ಒಡಬುಗಳು’, ‘ಕನಸ ಕೇಳವ್ವ’, ‘ಒಳಗಣ್ಣಿನ ಹೊರನೋಟ’ ಮುಂತಾದ ಸಂಪಾದನೆಗಳಿವೆ. ‘ಸಂಕ್ರಮಣ’, ‘ಅಗ್ನಿ’, ‘ಸಕಾಲಿಕ’, ‘ಭಾನುವಾರ’, ‘ಕರುಣಾ ಸಂಚಿಕೆ’ ಮುಂತಾದ ಪತ್ರಿಕೆಗಳಲ್ಲಿ ಅಂಕಣಗಳನ್ನೂ ಮೂಡಿಸಿದ್ದರು.

    ಡಾ.ಕಮಲಾ ಹೆಮ್ಮಿಗೆ ಅನೇಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿನ ಸಮಾವೇಶಗಳಲ್ಲಿ, ನ್ಯಾಶನಲ್ ಬುಕ್ ಟ್ರಸ್ಟ್ ಸಂವಾದ ಕಾರ್ಯಕ್ರಮದಲ್ಲಿ ಹಾಗೂ ಅನೇಕ ವೇದಿಕೆಗಳಲ್ಲಿ ಸಾಹಿತ್ಯ ವಿಚಾರ ಮಂಡಿಸಿದ್ದರು.

    ಅವರಿಗೆ ಕರ್ನಾಟಕ ‘ರಾಜ್ಯೋತ್ಸವ ಪ್ರಶಸ್ತಿ’, ‘ ಕೆ.ಎಸ್.ಎನ್. ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಾಹಿತ್ಯ ಪ್ರಶಸ್ತಿ’, ಕರ್ನಾಟಕ ರಾಜ್ಯ ಸರಕಾರದ ‘ಕಿತ್ತೂರು ಚೆನ್ನಮ್ಮ ಪ್ರಶಸ್ತಿ’, ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯಶ್ರೀ ಪ್ರಶಸ್ತಿ’, ‘ಮಾಸ್ತಿ ಕಾದಂಬರಿ ಪುರಸ್ಕಾರ’ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಇವರು ಮಾಡಿದ ಸಾಹಿತ್ಯ ಕೃಷಿಯನ್ನು ಅರಸಿ ಬಂದವುಗಳು.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | “ಯಕ್ಷಕಲಾ ನಿಪುಣೆ” ಕೀರ್ತನಾ ಉದ್ಯಾವರ
    Next Article ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದಿಂದ ‘ಕವಿ ನಾಗಚಂದ್ರ’ ಉಪನ್ಯಾಸ ಕಾರ್ಯಕ್ರಮ | ಸೆಪ್ಟೆಂಬರ್ 25ರಂದು 
    roovari

    Add Comment Cancel Reply


    Related Posts

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025

    ಕೊಂಕಣಿ ಲೇಖಕಿಯರ ಸಾಹಿತ್ಯ ಪ್ರಸ್ತುತಿ ‘ಅಸ್ಮಿತಾ’ ವಿಶೇಷ ಕಾರ್ಯಕ್ರಮ

    May 20, 2025

    ಮಂಗಳೂರು ಉರ್ವಸ್ಟೋರಿನಲ್ಲಿ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ | ಮೇ 25

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.