Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸ್ತ್ರೀ ನಾಟಕೋತ್ಸವ’ | ಜುಲೈ 06 ಮತ್ತು 07

    July 1, 2025

    ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’

    July 1, 2025

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜುಲೈ 07ರಿಂದ 24

    July 1, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದಲ್ಲಿ ಸಾಧಕರಿಗೆ ಸನ್ಮಾನ
    Dance

    ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದಲ್ಲಿ ಸಾಧಕರಿಗೆ ಸನ್ಮಾನ

    March 28, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹೊನ್ನಾವರ : ಹೊನ್ನಾವರದ ಗುಣವಂತೆಯಲ್ಲಿ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದ 5ನೇ ದಿನದ ಕಾರ್ಯಕ್ರಮವು ದಿನಾಂಕ 17-03-2024ರಂದು ನಡೆಯಿತು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೈಸೂರಿನ ಖ್ಯಾತ ಸಾಹಿತಿಗಳಾದ ಶ್ರೀ ಜಿ. ಎಸ್. ಭಟ್ಟ “ಗ್ರಾಮೀಣ ಪ್ರದೇಶವಾದ ಗುಣವಂತೆಯಲ್ಲಿ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಆಗುತ್ತಿರುವುದು ಸಾಂಸ್ಕೃತಿಕ ಅನನ್ಯತೆಯ ಅಪೂರ್ವ ಕಾರ್ಯಕ್ರಮವೆಂದು ಭಾವಿಸುತ್ತೇನೆ. ಇಂತಹ ಅಪರೂಪದ ಕಾರ್ಯಕ್ರಮವನ್ನು ಸರ್ಕಾರ ಗುರುತಿಸಿ ಸ್ಥಿರ ಅನುದಾನವನ್ನು ನೀಡಬೇಕು. ನಿರಂತರ ಯಕ್ಷಗಾನ ಚಿಂತನೆಯ ಈ ಕೆರೆಮನೆಯ ನೆಲದಲ್ಲಿ “ಯಕ್ಷಗಾನ ವಿಶ್ವವಿದ್ಯಾಲಯ” ಸ್ಥಾಪನೆಯಾಗಬೇಕು, ತನ್ಮೂಲಕ ಸಂಶೋಧನೆಗಳು ನಡೆದು ಯಕ್ಷಗಾನದ ವಿಸ್ತಾರ ಸಮಾಜಕ್ಕೆ ತಲುಪಬೇಕು. ಯಕ್ಷಗಾನ ಅಕಾಡೆಮಿಯಲ್ಲಿ ಉತ್ತರ ಕನ್ನಡದವರನ್ನು ನಿರ್ಲಕ್ಷಿಸಿದ್ದನ್ನ ಕೂಡಲೇ ಸರಿಪಡಿಸಬೇಕು.” ಎಂದು ಸರ್ಕಾರವನ್ನು ಆಗ್ರಹಿಸಿದರು.

    ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯಮಾನ್ಯರಿಂದ ದೀಪ ಪ್ರಜ್ವಲನದ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಸಾಗರದ ಕಲಾಸಂಘಟಕರಾದ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟ, ಜಾನಪದ ತಜ್ಞ ಮತ್ತು ಸಂಶೋಧಕರಾದ ಡಾ. ಮೋಹನ ಕುಂಟಾರ್, ಕಣಿಪುರ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ನಾರಾಯಣ ಚಂಬಲ್ತಿಮಾರ ಇವರಿಗೆ ನೀಡಿ ಗೌರವಿಸಲಾಯಿತು.

    ಪ್ರಶಸ್ತಿ ಸ್ವೀಕರಿಸಿದ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟರು ಮಾತನಾಡಿ “ಸಂಘಟನೆಯು ಅತಿ ದುಸ್ತರವಾದ ಕೆಲಸ, ಅದರಲ್ಲಿಯೂ ಯಕ್ಷಗಾನ ಸಂಘಟನೆ ಕಷ್ಟ ಸಾಧ್ಯ. ಪ್ರಸ್ತುತ ದೇಶದ ವಿವಿಧ ಪ್ರಕಾರಗಳ ಕಲೆಯನ್ನ ಈ ನೆಲದಲ್ಲಿ ಪ್ರದರ್ಶಿಸುವಂತಹ ಅತ್ಯುತ್ತಮ ಕಾಯಕ ಮಾಡುತ್ತಿರುವವರು ಶ್ರೀ ಶಿವಾನಂದ ಹೆಗಡೆಯವರು.” ಎಂದು ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

    ಶ್ರೀ ಮೋಹನ ಕುಂಟಾರ್ ಮಾತನಾಡಿ “ವೇದ, ಪುರಾಣ, ಉಪನಿಷತ್ತುಗಳನ್ನು ಯಕ್ಷಗಾನ ಕಲೆಯ ಮೂಲಕ ಸಮಾಜದ ಎಲ್ಲ ಸ್ತರದ ವ್ಯಕ್ತಿಗಳಿಗೆ ಸರಳವಾಗಿ ಮುಟ್ಟಿಸಬಹುದಾಗಿದೆ. ಕಲಾವಿದನಾದವನಿಗೆ ತಾಳ್ಮೆ, ಸಿದ್ಧತೆ, ಬದ್ಧತೆ,
    ಮಾನವೀಯ ಸಂವೇದನೆ, ಅಭಿಪ್ರಾಯ ಕೇಳುವ ಗುಣ ಮತ್ತು ಭಾವನೆಗಳು ಇದ್ದಲ್ಲಿ ,’ಮನುಷ್ಯ ಸಂವೇದನೆಯ ಸಂವರ್ಧನಾ ಭಾವ’ ಮೂಡಿಸಲು ಸಾಧ್ಯ.” ಎಂದರು.

    ಶ್ರೀ ನಾರಾಯಣ ಚಂಬಲ್ತಿಮಾರ್ ಮಾತನಾಡಿ “ನಾಟ್ಯೋತ್ಸವ ರಾಷ್ಟ್ರಮಟ್ಟದ ಕಲಾಪ್ರಕಾರವನ್ನು ವೈಭವೀಕರಿಸುವ ಉತ್ಸವವಾಗಿದೆ. ಪ್ರಬುದ್ಧ ಪ್ರೇಕ್ಷಕರನ್ನ ನಿರ್ಮಿಸುವ, ಸಾಂಸ್ಕೃತಿಕ ಕಲ್ಪನೆಯ ಬೀಜವನ್ನು ವೃಕ್ಷವನ್ನಾಗಿಸುವ, ಭಾರತವನ್ನು ಅರಿಯುವ, ರಾಷ್ಟ್ರೀಯ ಕಲಾವಿದರನ್ನ ಹುಟ್ಟಿಸುವ ‘ಧ್ಯೇಯ’ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಗಮನಿಸಬಹುದಾಗಿದೆ.” ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್. ಎಸ್. ಹೆಗಡೆ ಮಾತನಾಡಿ “ಸಮಾಜದಲ್ಲಿ ಭಾವೈಕ್ಯತೆ ಮೂಡಿಸುವ, ಸಂಸ್ಕೃತಿಯನ್ನು ಬೆಳೆಸುವ ಮತ್ತು ಪರಂಪರೆಯನ್ನು ಮುಂದುವರೆಸುವ ಉದ್ದೇಶ ನಾಟ್ಯೋತ್ಸವದ್ದಾಗಿದೆ. ಕಲಾವಿದನ ಸಾರ್ಥಕ್ಯದ ಹಿಂದಿರುವ ಶ್ರಮ, ಆರಾಧನೆ, ನಿರಂತರ ತುಡಿತ, ಮತ್ತು ಕಲಾವಿದನಲ್ಲಿರುವ ಆಸಕ್ತಿಯನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ.” ಎಂದರು.

    ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ, ಪ್ರಾಧ್ಯಾಪಕರಾದ ಶ್ರೀಧರ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸುತ್ತಾ “ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಯಕ್ಷಗಾನದ ವಾತಾವರಣದಲ್ಲಿ ಬೆಳೆದಾಗ ತನ್ನ ಜೀವನ ಪಥದಲ್ಲಿ ಸಾಂಸ್ಕೃತಿಕ ಸಂವೇದನೆ ಪಡೆದು ಉತ್ತಮ ವ್ಯಕ್ತಿಯಾಗಲು ಸಾಧ್ಯ.” ಎಂದು ತನ್ನ ಜೀವನದ ಉದಾಹರಣೆಗಳನ್ನ ಉಲ್ಲೇಖಿಸಿ ತಿಳಿಸಿದರು.

    ಊರಿನ ಮುಖಂಡರಾದ ಶ್ರೀ ಗಣಪಯ್ಯ ಗೌಡ ಮಾತನಾಡಿ “ನಾಟ್ಯೋತ್ಸವದಿಂದ ‘ಕೆರೆಮನೆ’ ಎಂಬ ಗ್ರಾಮೀಣ ಪ್ರದೇಶ ದೇಶದ ನಕಾಶೆಯಲ್ಲಿ ಗುರುತಿಸುವಂಥಾಗಿದೆ,ಈ ಪರಂಪರೆ ಮುಂದುವರಿದು ಸುಧೀರ್ಘ ವಸಂತಗಳ ಸಾರ್ಥಕತೆ ಪಡೆಯಲಿ.” ಎಂದು ಹಾರೈಸಿದರು.

    ಯಕ್ಷಗಾನ ಶೈಲಿಯಲ್ಲಿ ಶ್ರೀ ಅನಂತ ಹೆಗಡೆ ದಂತಳಿಕೆ ಗಣಪತಿ ಸ್ತುತಿಗೈದರು. ಹಿಮ್ಮೇಳದಲ್ಲಿ ಮೃದಂಗ ವಾದಕರಾಗಿ ಶ್ರೀ ಶ್ರೀಧರ್ ಗೌಡ ಮತ್ತು ಚಂಡೆಯಲ್ಲಿ ಶ್ರೀಧರ ಮರಾಠೆ ಸಾಥ್ ನೀಡಿದರು.

    ಕೆರೆಮನೆ ಶಿವಾನಂದ ಹೆಗಡೆ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆರಮನೆ ಶ್ರೀಧರ ಹೆಗಡೆ ಸರ್ವರಿಗೂ ಕಸೆ ಶಾಲು ಹಾಕಿ ಗೌರವಿಸಿ ವಂದನೆಗಳನ್ನು ಸಮರ್ಪಿಸಿದರು.

    ಶ್ರೀ ಪ್ರದೀಪ್ ಖರ್ವಾ ಮತ್ತು ಶ್ರೀ ಜಿ. ಆರ್. ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರದಲ್ಲಿ ಸಂಸ್ಕೃತಿಕ ಸಿಂಚನವಾಗಿ ಹೈದರಾಬಾದಿನಿಂದ ಆಗಮಿಸಿದ ಮುಕ್ತಿಶ್ರೀ ಇವರಿಂದ ಖತಕ್ ನೃತ್ಯ ಪ್ರಸ್ತುತಗೊಂಡಿತು. ಗಾಯಕರಾಗಿ ನಾಗೇಶ್ ಅಡಗಾಂವ್ಕರ್, ತಬಲಾದಲ್ಲಿ ಆಶಯ ಕುಲಕರ್ಣಿ, ಹಾರ್ಮೋನಿಯಂನಲ್ಲಿ ಅಭಿಷೇಕ ಕುಲಕರ್ಣಿ ಮತ್ತು ಪಕಾವಾಜ್ ದಲ್ಲಿ ಕೃಷ್ಣಸಾಲುಂಬೆ ಸಹಕರಿಸಿದರು. “ನಾಟ್ಯ ಶ್ರೀ ಕಲಾತಂಡ” ಶಿವಮೊಗ್ಗ ಇವರಿಂದ ‘ಶರಸೇತು ಬಂಧ’ ಯಕ್ಷಗಾನ ವಿದ್ವಾನ್ ದತ್ ಮೂರ್ತಿಯವರ ಸಂಚಾಲಕತ್ವದಲ್ಲಿ ಸುಂದರವಾಗಿ ಮೂಡಿಬಂದಿತು.

    Share. Facebook Twitter Pinterest LinkedIn Tumblr WhatsApp Email
    Previous Articleತಿಂಗಳ ಸರಣಿಯಲ್ಲಿ ‘ಅಂಗದ ಸಂಧಾನ’ ತಾಳಮದ್ದಳೆ
    Next Article ಹಿರಿಯ ರಂಗಕರ್ಮಿ ರಾಮದಾಸ್ ನಿಧನ
    roovari

    Add Comment Cancel Reply


    Related Posts

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ

    June 30, 2025

    ಉಪ್ಪಿನಂಗಡಿಯ ಶ್ರೀರಾಮ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ

    June 30, 2025

    ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’ | ಜುಲೈ 01

    June 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.