ಮಂಗಳೂರು : ಚಕ್ರಪಾಣಿ ನೃತ್ಯ ಕಲಾಕೇಂದ್ರ ಅತ್ತಾವರ ಮಂಗಳೂರು ಇವರ ವತಿಯಿಂದ 170 ಘಂಟೆ ನಿರಂತರ ಭರತನಾಟ್ಯ ಮಾಡಿ ಮ್ಯಾರಥಾನ್ ಗೋಲ್ಡನ್ ಬುಕ್ ದಾಖಲೆ ಮಾಡಿದ ರೆಮೋನಾ ಎವೆಟ್ ಪಿರೇರಾ ಇವರಿಗೆ ‘ಅಭಿನಂದನಾ ಕಾರ್ಯಕ್ರಮ’ವನ್ನು ದಿನಾಂಕ 24 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ಆಯೋಜಿಸಲಾಗಿದೆ.
ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.