Subscribe to Updates

    Get the latest creative news from FooBar about art, design and business.

    What's Hot

    ‘ಸೇವಾ ಭೂಷಣ ಪ್ರಶಸ್ತಿ’ಗೆ ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆ

    February 19, 2026

    ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ‘ನೃತ್ಯ ಸಿಂಚನ’ | ಫೆಬ್ರವರಿ 21

    February 19, 2026

    ಮೈಸೂರಿನಲ್ಲಿ ‘ಹುತ್ತದಲ್ಲಿ ಹುತ್ತ’ ಅಪೂರ್ವ ಹಾಸ್ಯ ನಾಟಕ ಪ್ರದರ್ಶನ | ಫೆಬ್ರವರಿ 22

    February 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೊಂಬತ್ತರ ಸುಂದರಾಂಗನಿಗೆ ಯಕ್ಷ ಮುಕುಟದ ಅಲಂಕಾರ
    Felicitation

    ತೊಂಬತ್ತರ ಸುಂದರಾಂಗನಿಗೆ ಯಕ್ಷ ಮುಕುಟದ ಅಲಂಕಾರ

    January 4, 2025Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ : ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಲೋಕದ ಹರಿಕಾರ, ಅಜಾತಶತ್ರು ತೊಂಬತ್ತರ ದಾರ್ಶನಿಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರು ಬಸ್ರೂರಿನ ಹೆಗ್ಡೆಯವರ ಸ್ವಗೃಹದಲ್ಲಿ ದಿನಾಂಕ 23 ಡಿಸೆಂಬರ್ 2024ರಂದು ಸನ್ಮಾನಿಸಿದರು.

    ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಕುಂದರ್ ಇವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಯಕ್ಷಗಾನದ ಕೇದಿಗೆ ಮಂದಲೆ ತೊಡಿಸಿ, ಮಣಿಸರದೊಂದಿಗೆ ತೊಂಬತ್ತರ ಸುಂದರಾಂಗ ಹೆಗ್ಡೆಯವರನ್ನು ಶೃಂಗರಿಸಿ ಅಭಿನಂದಿಸಲಾಯಿತು. ಶ್ರೀಹೆಗ್ಡೆಯವರು ಮಾತನಾಡುತ್ತಾ “ಯಕ್ಷಗಾನ ಸಮಾಜವನ್ನು ಸಂಸ್ಕಾರವಂತರನ್ನಾಗಿ ರೂಪಿಸುತ್ತದೆ. ಧರ್ಮವಂತರನ್ನಾಗಿ ಬಾಳುವಲ್ಲಿ ಸಹಕರಿಸುತ್ತದೆ. ಪುರಾಣ ಮುಂತಾದ ಅನೇಕ ವಿಚಾರಗಳನ್ನು ತಿಳಿಸುತ್ತಾ ಜನರನ್ನು ವಿದ್ಯಾವಂತರನ್ನಾಗಿಸುತ್ತದೆ. ಇಂತಹ ಕಲೆಯನ್ನು ಉಳಿಸಿ ಬೆಳಸುವ ಬಗ್ಗೆ ಪರಿಶ್ರಮಿಸುತ್ತಿರುವ ಯಕ್ಷಗಾನ ಕಲಾಕೇಂದ್ರಕ್ಕೆ ಶುಭ ಹಾರೈಕೆಗಳು” ಎಂದು ಹೇಳಿದರು.

    ಅಧ್ಯಕ್ಷರಾದ ಆನಂದ ಕುಂದರ್ ಇವರು ಅಪ್ಪಣ್ಣ ಹೆಗ್ಡೆಯುವರಿಗೆ ತೊಂಬತ್ತರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಭಾಗವತರಾದ ರಾಘವೇಂದ್ರ ಮಯ್ಯ ಮತ್ತು ಗಣೇಶ ಆಚಾರ್ಯರು ವಿಷ್ಣುಮೂರ್ತಿ ಬೇಳೂರರು ರಚಿಸಿದ ಅಪ್ಪಣ್ಣ ಹೆಗ್ಡೆಯುವರ ಕುರಿತ ಯಕ್ಷ ಪದ್ಯವನ್ನು ಹಾಡಿದರು. ವಾಸುದೇವ ಕಾರಂತ, ವೈಕುಂಠ ಹೇರ್ಳೆ, ಸೀತಾರಾಮ ಸೋಮಯಾಜಿ, ವಿಶ್ವೇಶ್ವರ ಹೊಳ್ಳ, ಪ್ರಭಾಕರ ಐತಾಳ್, ಅಂಬರೀಷ್ ಭಟ್ಟ, ಮಾಧವ ಮಣೂರು, ರಾಘವೇಂದ್ರ ಹೊಳ್ಳ, ರಾಮನಾಥ ಅಲ್ಲೆ, ಶ್ರೀನಿವಾಸ ಉಪಾಧ್ಯ, ಸತ್ಯನಾರಾಯಣ ಭಟ್ಟ, ಮೇಘ ಶ್ಯಾಮ ಹೆಬ್ಬಾರ್ ಉಪಸ್ಥಿತರಿದ್ದರು. ವಿಷ್ಣುಮೂರ್ತಿ ಬೇಳೂರು ಕೃತಜ್ಞತೆ ಸಲ್ಲಿಸಿದರು.

    yakshagana
    Share. Facebook Twitter Pinterest LinkedIn Tumblr WhatsApp Email
    Previous Articleಚುಟುಕು ಕವಿಶ್ರೇಷ್ಠ, ಹಾಸ್ಯ ಕವಿ, ವ್ಯಂಗ್ಯ ಚಿತ್ರ ಕಲಾವಿದ ಶ್ರೀ ವೆಂಕಟ್ ಭಟ್ ಎಡನೀರು ಜಿಲ್ಲಾಧ್ಯಕ್ಷರಾಗಿ ಆಯ್ಕೆ
    Next Article ಏಮ್ ಫಾರ್ ಸೇವಾ ಸಂಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ‘ರಾಮಂ ಭಜೇ’ ಸಂಗೀತ ಕಾರ್ಯಕ್ರಮ | ಜನವರಿ 12
    roovari

    Add Comment Cancel Reply


    Related Posts

    ‘ಸೇವಾ ಭೂಷಣ ಪ್ರಶಸ್ತಿ’ಗೆ ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆ

    February 19, 2026

    ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ

    February 18, 2026

    ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಮಾಸಿಕ ತಾಳಮದ್ದಲೆ

    February 18, 2026

    ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ‘ಯಕ್ಷ ಗಾನಾರ್ಚನೆ’

    February 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.