ಬೆಂಗಳೂರು : ಸಪ್ನ ಬುಕ್ ಹೌಸ್ ಬೆಂಗಳೂರು, ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಮತ್ತು ದಲಿತ ಸಾಹಿತ್ಯ ಪರಿಷತ್ತು ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ, ಸಾಕ್ಷ್ಯಚಿತ್ರ, ಕಥಾ ಆಲಾಪ, ಐದು ಕೃತಿಗಳ ಜನಾರ್ಪಣೆ ಮತ್ತು ಅಭಿನಂದನೆ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು, ಕುಮಾರಪಾರ್ಕ್ ಪೂರ್ವ, ಗಾಂಧಿ ನಗರ, ಎರಡನೆಯ ಮಹಡಿ, ಮಹಾದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10-00 ಗಂಟೆಗೆ ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ‘ಜನಪದ ಗೀತಗಾಯನ’ ಪ್ರಸ್ತುತಗೊಳ್ಳಲಿದೆ.
ಉನ್ನತ ಶಿಕ್ಷಣ ಪರಿಷತ್ತು ಇದರ ಉಪಾಧ್ಯಕ್ಷರಾದ ಪ್ರೊ. ಎಸ್.ಆರ್. ನಿರಂಜನ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಬೆಂಗಳೂರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರು ಆಶಯ ಭಾಷಣ ಮಾಡಲಿರುವರು. ಪ್ರೊ. ಪಿ.ಕೆ. ಖಂಡೋಬಾ, ಪ್ರೊ. ವ್ಹಿ.ಜಿ. ಪೂಜಾರ, ಪ್ರೊ. ಡಿ.ಬಿ. ನಾಯಕ, ಪ್ರೊ. ಬಸವರಾಜ ಸಬರದ ಮತ್ತು ಪ್ರೊ. ದೊಡ್ಡಣ್ಣ ಬಜಂತ್ರಿ ಇವರಿಗೆ ಗುರು ವಂದನೆ ಹಾಗೂ ಡಾ. ಬಸವರಾಜ ಕೊನೇಕ್, ಶ್ರೀ ಪ್ರಕಾಶ ಕಂಬತ್ತಳ್ಳಿ, ಶ್ರೀ ಗುರುಮೂರ್ತಿ ಮತ್ತು ಶ್ರೀ ಕೃಷ್ಣಮೂರ್ತಿ ಇವರುಗಳಿಗೆ ಸನ್ಮಾನ ಮಾಡಲಾಗುವುದು. ಗೋಷ್ಠಿ 01ರಲ್ಲಿ ಪ್ರೊ. ಚಿತ್ತಯ್ಯ ಪೂಜಾರ ಇವರಿಂದ ‘ಪೋತೆಯವರ ಕಥನ ಸಾಹಿತ್ಯ’, ಪ್ರೊ. ಎಚ್.ಜಿ. ಶ್ರೀಧರ ಇವರಿಂದ ‘ಪೋತೆಯವರ ಸಂಸ್ಕೃತಿ ಕಥನ’, ಪ್ರೊ. ಚಲುವರಾಜು ಇವರಿಂದ ‘ಪೋತೆಯವರ ವ್ಯಕ್ತಿ ಕಥನ’ ವಿಷಯ ಬಗ್ಗೆ ವಿಚಾರ ಸಂಕಿರಣ ಹಾಗೂ ಗೋಷ್ಠಿ 02ರಲ್ಲಿ ಮಹಿಷಾ ರೆಡ್ಡಿ ಮುನ್ನೂರ, ಡಾ. ಲಕ್ಷ್ಮೀಶಂಕರ ಜೋಶಿ ಹಾಗೂ ಸೌಖ್ಯಶ್ರೀ ಕುಲಕರ್ಣಿ ಇವರಿಂದ ‘ಕಥಾ ಆಲಾಪ’ ಜರಗಲಿದೆ. ಸಂಜೆ 3-30 ಗಂಟೆಗೆ ಐದು ಕೃತಿಗಳ ಜನಾರ್ಪಣೆ ಮತ್ತು ಕಲಬುರಗಿಯ ಗುಲಬರ್ಗಾ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆಯವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ.