ಮಂಗಳೂರು : ಕುದ್ರೋಳಿಯಲ್ಲಿ ದಿನಾಂಕ 01 ಅಕ್ಟೋಬರ್ 2025ರಂದು ಮಂಗಳೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಏರ್ಪಡಿಸಿದ್ದ ಕನ್ನಡ ಹಾಗೂ ತುಳು ಭಾಷೆಯ ದಸರಾ ಕವನ ಸ್ಪರ್ಧೆಯಲ್ಲಿ ಕನ್ನಡ ವಿಭಾಗದಲ್ಲಿ ದ್ವಿತೀಯ ಸ್ಥಾನ ವಿಜೇತರಾದ ಡಾ. ಸುರೇಶ ನೆಗಳಗುಳಿಯವರನ್ನು ಶಾಲು ಫಲ ಪುಷ್ಪ ನೆನಪಿನ ಕಾಣಿಕೆ ಸಹಿತವಾಗಿ ಗೌರವಿಸಲಾಯಿತು. ಇದೇ ವೇಳೆ ತುಳು ಕವನ ಪ್ರಥಮ ಸ್ಥಾನ ವಿಜೇತ ಚೇತನ ವರ್ಕಾಡಿಯವರನ್ನು ಗೌರವಿಸಲಾಯಿತು.