ಬೆಳ್ತಂಗಡಿ : ತುಳು ಶಿವಳ್ಳಿ ಸಭಾ ಬೆಳ್ತಂಗಡಿ ತಾಲೂಕು ಕುವೆಟ್ಟು ವಲಯದ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025ರಂದು ಬೆಳ್ತಂಗಡಿ ಲಾಯಿಲ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದ ಹಿಮ್ಮೇಳ ಕಲಾವಿದ ‘ಕಟೀಲು ಶ್ರೀನಿಧಿ ಆಸ್ರಣ್ಣ ಪ್ರಶಸ್ತಿ ವಿಜೇತ’ ಗೇರುಕಟ್ಟೆಯ ಮಧೂರು ರಾಮ ಪ್ರಕಾಶ ಕಲ್ಲೂರಾಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಮನೊಳಿತ್ತಾಯರಾದ ಹರಿಪ್ರಸಾದ ಅರಂಬುಡತ್ತಾಯ, ಬೆಳ್ತಂಗಡಿ ವಲಯದ ಗಣ್ಯರಾದ ಶ್ರೀ ರಾಜ ಪ್ರಸಾದ ಪೊಳ್ನಾಯ, ಶ್ರೀ ಗಂಗಾಧರ ಕೆವುಡೇಲು, ಶ್ರೀ ಹರೀಶ್ ರಾವ್ ಮುಂಡ್ರುಪಾಡಿ, ಶ್ರೀ ಗಂಗಾಧರ್ ರಾವ್ ಕೆವುಡೇಲು, ಡಾ. ಡಿ ಶ್ರೀಪತಿ ಅರ್ಮುಡತ್ತಾಯ, ಶ್ರೀ ರಾಘವೇಂದ್ರ ಭಾಂಗಿನ್ನಾಯ, ಶ್ರೀ ದಯಾಕರ ಕುತ್ಯಾರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

