Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವಡ

    June 6, 2025

    ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 6, 2025

    ಡಾ. ಎಂ.ಮೋಹನ ಆಳ್ವ ಇವರಿಗೆ ‘ಡಾ. ಜಿ. ಪಿ. ರಾಜ ರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’

    June 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸರಯೂ ಸಪ್ತಾಹದಲ್ಲಿ ಸಂಧ್ಯಾ ರಾವ್ ಇವರಿಗೆ ಸನ್ಮಾನ
    Yakshagana

    ಸರಯೂ ಸಪ್ತಾಹದಲ್ಲಿ ಸಂಧ್ಯಾ ರಾವ್ ಇವರಿಗೆ ಸನ್ಮಾನ

    June 5, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ‘ಯಕ್ಷಪಕ್ಷ – ರಜತ ಸರಯೂ’ಸಮಾರಂಭದ 14ನೇ ದಿನದ ಕಾರ್ಯಕ್ರಮವು ದಿನಾಂಕ 31 ಜೂನ್ 2025ರ ಬುಧವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಆರೂರು ಆಶಾ ಪ್ರಭಾಕರ ರಾವ್ ಮಾತನಾಡಿ “ಇಂದು ಯಕ್ಷಗಾನ ರಂಗ ವಿಸ್ತರಿಸಲ್ಪಟ್ಟಿದೆ. ಪುರುಷರಂತೆಯೇ ಮಹಿಳಾ ಕಲಾವಿದರೂ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ. ದೇಶವಿದೇಶಗಳಿಗೂ ತಮ್ಮ ಕಲಾ ಪ್ರದರ್ಶನವನ್ನು ವಿಸ್ತರಿಸಿದ್ದಾರೆ. ಅನೇಕರು ಮೇಳದ ಕಲಾವಿದರಿಗೆ ಸಮದಂಡಿಯಾಗಿ ನಿಲ್ಲುವಂತೆ ಪ್ರಬುದ್ಧರಾಗುತ್ತಿದ್ದಾರೆ. ಇಂದು ಸರಯೂವಿನಿಂದ ಸನ್ಮಾನಗೊಳ್ಳುತ್ತಿರುವ ಸಂಧಾ ರಾವ್ ಕೂಡಾ ಓರ್ವ ಸಂಘಟಕಿ, ಯಕ್ಷಕಲಾವಿದೆ, ಉತ್ತಮ ವಾಗ್ಮಿಯೂ ಆಗಿದ್ದಾರೆ. ಈ ಪುಣ್ಯಕ್ಷೇತ್ರದಲ್ಲಿ ಗೌರವಿಸಲ್ಪಡುವುದು ಅವರ ಭಾಗ್ಯ” ಎಂದರು.
    ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುಕೂಟ (ರಿ) ಸಂಸ್ಥೆಯ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ರಜತ ಸಂಭ್ರಮದಲ್ಲಿರುವ ಮಕ್ಕಳ ಮೇಳದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ ಶುಭಾಶಂಸನೆಗೈದರು. ಸನ್ಮಾನಿತೆ ಸುಧಾ ವಿ. ರಾವ್ ಧನ್ಯತೆಯನ್ನು ವ್ಯಕ್ತಪಡಿಸಿದರು. ನಾಗಕನ್ನಿಕಾ ದೇವಳದ ಪ್ರಬಂಧಕ ಯೋಗೀಶ್ ಕುಮಾರ್, ಅನುಪಮಾ ಅಡಿಗ, ಸುಧಾಕರ್ ರಾವ್ ಪೇಜಾವರ್, ವೃಷಬ್ ಶೆಟ್ಟಿ, ಗೌತಮ, ನಿತ್ಯಶ್ರೀ, ದೃಶಾಲ್ ಉಪಸ್ಥಿತರಿದ್ದರು. ಗೌರವ್ ರಾವ್ ಸನ್ಮಾನ ಪತ್ರ ವಾಚಿಸಿ, ಶೋಭಾ ಪೇಜಾವರ್ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಇಟಗುಳಿಯಲ್ಲಿ ‘ಬ್ರಹ್ಮ ಕಪಾಲ’ ಪೌರಾಣಿಕ ಯಕ್ಷಗಾನ ಪ್ರದರ್ಶನ | ಜೂನ್ 07
    Next Article ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿರಂತರ ಹಾಡಿ ವಿಶ್ವದಾಖಲೆ ನಿರ್ಮಿಸಿದ ಯಶವಂತ್ ಎಂ.ಜಿ.
    roovari

    Add Comment Cancel Reply


    Related Posts

    ವಿಶೇಷ ಲೇಖನ – ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವಡ

    June 6, 2025

    ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 6, 2025

    ಡಾ. ಎಂ.ಮೋಹನ ಆಳ್ವ ಇವರಿಗೆ ‘ಡಾ. ಜಿ. ಪಿ. ರಾಜ ರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’

    June 6, 2025

    ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭ | ಜೂನ್ 08

    June 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.