ಮಂಗಳೂರು : ಕೈಕಂಬದ ‘ಯಕ್ಷತರಂಗಿಣಿ’ ಇದರ 17ನೇ ವರ್ಷದ ‘ಪೌರಾಣಿಕ ಯಕ್ಷಸಂಭ್ರಮ’ವು ದಿನಾಂಕ 03-02-2024ರಂದು ಕೈಕಂಬ ಕಿನ್ನಿಕಂಬಳದ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಶ್ರೀ ಕೋದಂಡರಾಮ ಕೃಷಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದ ಯಕ್ಷಗಾನ ರಂಗ ಪೂಜೆ ವೇದಿಕೆಯಲ್ಲಿ ಯಕ್ಷಗಾನ ಕಲಾವಿದರಾದ ಗುಂಡಿಮಜಲು ಗೋಪಾಲಕೃಷ್ಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಜಗದಾಭಿರಾಮ ಸ್ವಾಮಿ ಪಡುಬಿದ್ರಿ, ಅ.ನ.ಭ. ಪೊಳಲಿ ಮತ್ತು ನಾರಾಯಣ ಮಳಲಿ ಅವರನ್ನು ಸಮಾನಿಸಲಾಯಿತು.
ಸಮ್ಮಾನಿತ ಜಗದಾಭಿರಾಮ ಪಡುಬಿದ್ರಿ ಮಾತನಾಡಿ, ಕಲಾವಿದರನ್ನು ಗುರುತಿಸುವ, ಸಮ್ಮಾನಿಸುವ ಕಲೆಗೆ ಬೆಲೆ ಕೊಡುವ ಕೈಕಂಬದ ಯಕ್ಷತರಂಗಿಣಿಯ ಯಕ್ಷಕಲಾ ಸೇವೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಎಂ. ಹರಿರಾವ್ ಕೈಕಂಬ, ಎಂ. ನರಸಿಂಗ ರೈ ಕಿನ್ನಿಕಂಬಳ, ಡಾ. ಶ್ರೀಪತಿ ಕಿನ್ನಿಕಂಬಳ, ಮೇಳದ ಪ್ರಬಂಧಕ ಹರೀಶ್ ಭಟ್ ಬೋಳಂತಿಮೊಗರು, ರಾಜೀವ್ ಕೈಕಂಬ ಕಲಾವಿದರನ್ನು ಸಮ್ಮಾನಿಸಿದರು.
ಶ್ರೀಧರ್ ರಾವ್, ಸತೀಶ್ ಶೆಟ್ಟಿ, ಪ್ರಾಣೇಶ್ ಶೆಟ್ಟಿ, ಜಯಕರ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಉಮೇಶ್ ಆರ್. ಭಂಡಾರಿ, ಶ್ರೀನಾಥ್ ಶೆಟ್ಟಿ, ವಿ.ಸಿ. ಶೇಖರ್, ಹರಿಶ್ಚಂದ್ರ ಎ.ಜಿ., ರಾಜೇಶ್ ಭಟ್, ಮಹೇಶ್ ಶೆಟ್ಟಿ, ಮೋಹನ್ ಆಚಾರ್ಯ, ವರುಣಾಕ್ಷ ಕೆ., ನವೀನ್ ಆಚಾರ್ಯ ಉಪಸ್ಥಿತರಿದ್ದರು. ಶಿವರಾಯ ಪ್ರಭು ವಂದಿಸಿ, ಮಹೇಶ್ ಶೆಟ್ಟಿ ಮೊಗರು ಗುತ್ತು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ‘ಶ್ವೇತ ಕುಮಾರ, ಗದಾಯುದ್ಧ, ರಕ್ತರಾತ್ರಿ’ ಎಂಬ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಂಡಿತು.