ಬೆಂಗಳೂರು : ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಇವರ ಜಂಟಿ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ಬೆಂಗಳೂರು ಕಿರುನಾಟಕೋತ್ಸವ’ದ ಅಂತಿಮ ಹಂತದ ಸ್ಪರ್ಧೆಯು ದಿನಾಂಕ 12 ಜುಲೈ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಲಿದೆ.
ಅಂತಿಮ ಹಂತದ ಸ್ಪರ್ಧೆಗೆ ಆರು ನಾಟಕಗಳು ಆಯ್ಕೆಯಾಗಿದ್ದು, ರಿ-ವ್ಯೂ ಥಿಯೇಟರ್ ಕಲೆಕ್ಟೀವ್ ತಂಡದಿಂದ ‘ವಿಧುರ’, ವೀಕೆಂಡ್ ಥಿಯೇಟರ್ ಆನೇಕಲ್ ತಂಡದಿಂದ ‘3/4’, ದೃಶ್ಯ ಕಾವ್ಯ ತಂಡದಿಂದ ‘ನೀಲಿ–ನೀರು’, ಖಾಲಿರಂಗ ತಂಡದಿಂದ ‘ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ’, ವಿಜಯನಗರದ ಸ.ಪ್ರ.ದ. ಕಾಲೇಜಿನ ರಂಗ ಚಿರಂತನ ತಂಡದಿಂದ ‘ಅಕ್ಕ’ ಮತ್ತು ಸ್ಪಷ್ಟ ಥಿಯೇಟರ್ ತಂಡದಿಂದ ‘ಪಲ್ಸ್’ ನಾಟಕಗಳು ಪ್ರದರ್ಶನಗೊಳ್ಳಲಿದೆ.